ನೇತಾಜಿ ಬ್ರಿಗೇಡ್‌ನಿಂದ ಪುಸ್ತಕ ವಿತರಣೆ

New Project (23)
Published on

ಮೂಡುಬಿದಿರೆ: ಇಲ್ಲಿನ ನೇತಾಜಿ ಬ್ರಿಗೇಡ್ ಸಂಘಟನೆಯ ವಾರ್ಷಿಕ ಸೇವಾ ಯೋಜನೆಯ ಅಂಗವಾಗಿ ಪುರಸಭೆ ವ್ಯಾಪ್ತಿಯ ಗಾಂಧಿನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಸೋಮವಾರ ನೋಟ್ ಪುಸ್ತಕ ವಿತರಿಸಲಾಯಿತು.

ಪುರಸಭೆ ಸದಸ್ಯೆ ದಿವ್ಯಾ ಜಗದೀಶ್ ಪುಸ್ತಕ ವಿತರಿಸಿ ಮಾತನಾಡಿ, ಸರ್ಕಾರಿ ಶಾಲೆಯ ಏಳಿಗೆಗಾಗಿ ಶ್ರಮಿಸುತ್ತಿರುವ ಯುವ ಸಂಘಟನೆ ನೇತಾಜಿ ಬ್ರಿಗೇಡ್ ಸೇವೆ ಶ್ಲಾಘನೀಯ ಎಂದರು.

ಎಸ್‌ಡಿಎಂಸಿ ಅಧ್ಯಕ್ಷೆ ಸುನಿತಾ ಶೆಟ್ಟಿ, ಮುಖ್ಯಶಿಕ್ಷಕಿ ಕ ಸ್ತೂರಿ, ನೇತಾಜಿ ಬ್ರಿಗೇಡ್ ಸಂಚಾಲಕ ರಾಹುಲ್ ಕುಲಾಲ್, ಅಧ್ಯಕ್ಷ ದಿನೇಶ್ ಶೆಟ್ಟಿ, ಸಹಸಂಚಾಲಕ ಎಸ್.ಕುಮಾರ್ ಮಾಸ್ತಿಕಟ್ಟೆ, ಪದಾಧಿಕಾರಿಗಳಾದ ಅಭಿಷೇಕ್ ಸಾಲ್ಯಾನ್, ನಿಖಿಲ್ ಭಟ್, ಪೂರ್ಣಚಂದ್ರ, ಶರಣ್ ಶೆಟ್ಟಿ, ಶಿಕ್ಷಕಿಯರಾದ ಭವ್ಯಾ, ಸುಪ್ರಿತಾ, ಅಕ್ಷತಾ, ಎಸ್‌ಡಿಎಂಸಿ ಸದಸ್ಯರು, ಪಾಲಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net