ಪುಸ್ತಕ ವಿತರಣೆ ಕಾರ್ಯ ಶ್ಲಾಘನೀಯ

2
ಸತ್ತಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮಕ್ಕಳಿಗೆ ಸುಂದರ ಭಾರತ ಪ್ರತಿಷ್ಠಾನ ವತಿಯಿಂದ ಹಮ್ಮಿಕೊಂಡಿದ್ದ ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಸುವಿಧಾ ಪರಿವಾರದ ಮುಖ್ಯಸ್ಥ ಸತೀಶ ಕುಲಕರ್ಣಿ ಹಾಗೂ ಸುಪ್ರೀತ ಕುಲಕರ್ಣಿ ಅವರನ್ನು ಸತ್ಕರಿಸಲಾಯಿತು. ಅಶೋಕ ಜಗದೇವ, ಇಲಾಯಿ ಮೀರಾಬಾಯಿ ಇತರರಿದ್ದರು.
Published on

ನಂದೇಶ್ವರ: ಅಥಣಿ ತಾಲೂಕಿನ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ 27 ಸಾವಿರ ನೋಟ್‌ಬುಕ್ ಸೇರಿ ರಾಜ್ಯಾದ್ಯಂತ 4.5 ಲಕ್ಷ ನೋಟ್‌ಬುಕ್‌ಗಳನ್ನು ಸುಂದರ ಭಾರತ ಪ್ರತಿಷ್ಠಾನ ವತಿಯಿಂದ ವಿತರಿಸಲಾಗಿದೆ ಎಂದು ಸುವಿಧಾ ಪರಿವಾರದ ಮುಖ್ಯಸ್ಥ ಸತೀಶ ಕುಲಕರ್ಣಿ ಹೇಳಿದರು.

ಸಮೀಪದ ಸತ್ತಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮಕ್ಕಳಿಗೆ ಸುಂದರ ಭಾರತ ಪ್ರತಿಷ್ಠಾನ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಅನೇಕ ವರ್ಷಗಳಿಂದ ಸುಂದರ ಭಾರತ ಪ್ರತಿಷ್ಠಾನ ಮುಖ್ಯಸ್ಥ ಪ್ರತಾಪ ಪರಾಶರ ತಮ್ಮ ಹಣದಲ್ಲಿ ಮಕ್ಕಳಿಗೆ ಪುಸ್ತಕ ವಿತರಿಸುತ್ತಿರುವುದು ಶ್ಲಾಘನೀಯ ಎಂದರು.

ಅಶೋಕ ಜಗದೇವ ಮಾತನಾಡಿ, ಸುಂದರ ಭಾರತ ಪ್ರತಿಷ್ಠಾನ ನೀಡಿದ ಕಲಿಕಾ ಪರಿಕರಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಿಸಲಾಯಿತು. ಸುವಿಧಾ ಪರಿವಾರದ ಮುಖ್ಯಸ್ಥ ಸತೀಶ ಕುಲಕರ್ಣಿ ಹಾಗೂ ಸುಪ್ರೀತ ಕುಲಕರ್ಣಿ ಅವರನ್ನು ಸತ್ಕರಿಸಲಾಯಿತು.

ಎಸ್‌ಡಿಎಂಸಿ ಅಧ್ಯಕ್ಷ ಶಿವಪುತ್ರ ಬಾಡಿಗಿ, ಸುಪ್ರೀತ ಕುಲಕರ್ಣಿ, ಮುಖ್ಯಶಿಕ್ಷಕ ಕುಮಾರಸ್ವಾಮಿ ಮಠ, ಬಸವರಾಜ ದಳವಾಯಿ, ಪಿಡಿಒ ಮುತ್ತುರಾಜ ಗುರವ, ಮಲ್ಲು ದೊಡಮನಿ, ಅಣ್ಣಪ್ಪ ರುದ್ರಗೌಡರ, ಮುಖ್ಯಶಿಕ್ಷಕ ಸುರೇಶ ಗಾಣಿಗೇರ, ಬಿ.ಎಚ್.ತೆಲಸಂಗ, ಇಲಾಯಿ ಮೀರಾಬಾಯಿ ಇತರರು ಇದ್ದರು. ಶಿಕ್ಷಕ ಅನಿಲ ಗಸ್ತಿ ನಿರೂಪಿಸಿದರು. ಆರ್.ಪಿ.ಪುರಾಣಿಕ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net