ಶಾಲೆಗಳಿಗೆ ಪುಸ್ತಕ ಕೊಡುಗೆ

IMG-20230901-WA0016
Published on

ಶಿರಸಿ: ಲೇಖಕಿ ನಾಗವೇಣಿ ಹೆಗಡೆ ಹೆಗ್ಗರ್ಸಿಮನೆಯವರು ತಾಲೂಕಿನ ವಿವಿಧ ಸರ್ಕಾರಿ ಪ್ರಾಥಮಿಕ ಶಾಲೆ ಗಳ ಗ್ರಂಥಾಲಯ ಕ್ಕೆ ಮಕ್ಕಳಿಗೆ ಉಪಾಯುಕ್ತ ವಾಗುವಂತಹ ಪುಸ್ತಕ ಗಳನ್ನು ಗುರುವಾರ ನೀಡಿದರು.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಳಲಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತಿಗಾರ್ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಂಚ್ನಳ್ಳಿ ಗ್ರಂಥಾಲಯಕ್ಕೆ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಯೋಗ್ಯವಾದಂಥಹ ಹಾಗೂ ಮಕ್ಕಳ ಮನರಂಜನೆಗೆ ಪೂರಕವಾದಂಥಹ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದರು.

ಇದನ್ನೂ ಓದಿ:ಹೈದರಾಬಾದ್ ಯುವತಿಯನ್ನು ಮದುವೆಯಾಗಿ ಅಲ್ಲೇ ನೆಲೆಸಿದ್ದ ಪಾಕಿಸ್ತಾನಿ ಯುವಕ ಅರೆಸ್ಟ್​​
ನಂತರ ಮಾತನಾಡಿದ ಅವರು ಮಕ್ಕಳಲ್ಲಿ ಓದುವ ಸಂಸ್ಕೃತಿ ಬೆಳೆಯಬೇಕು.

ಮಕ್ಕಳ ಆರೋಗ್ಯ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಮಾರಕವಾಗುವಂಥಹ ಮೊಬೈಲ್, ದೂರದರ್ಶನಗಳಿಂದ ದೂರ ಇರಿಸಲು ಓದಿನ ಹವ್ಯಾಸ ಅತ್ಯಂತ ಸಹಾಯಕಾರಿ.

ಹಾಗಾಗಿ ಮಕ್ಕಳಲ್ಲಿ ಓದಿನ ಅಭಿರುಚಿ ಹೆಚ್ಚಿಸುವ ಪ್ರಯತ್ನದತ್ತ ಪ್ರಮುಖವಾಗಿ ಪಾಲಕರು, ಪೋಷಕರು, ಶಿಕ್ಷಕರು ಗಮನಹರಿಸಬೇಕು.

ಮಕ್ಕಳ ಅಭಿರುಚಿಗೆ ತಕ್ಕಂತೆ ಕಥಾ ಹಂದರಗಳು, ಮಕ್ಕಳ ಕವಿತೆಗಳು, ಚಿತ್ರಕಥೆಗಳು, ಆದರ್ಶ ವ್ಯಕ್ತಿಗಳ ಬಗೆಗಿನ ಲೇಖನ ಮುಂತಾದ ಕೃತಿಗಳನ್ನು ಮಕ್ಕಳಿಂದ ಓದಲು ಹಚ್ಚಿಸಬೇಕು.

ಆಗ ಮಕ್ಕಳ ಓದಿನ ಶ್ರದ್ಧೆ ಹೆಚ್ಚುತ್ತದೆ ಎಂದು ಹೇಳಿದರು. ಶಾಲಾ ವಿದ್ಯಾರ್ಥಿಗಳು ಶಿಕ್ಷಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net