ಬರವಣಿಗೆ ನಿರಂತರವಾಗಿ ಸಾಗುತಲಿರಲಿ: ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಕಿವಿಮಾತು

1 (2)
Published on

ಮಂಡ್ಯ: ಬರವಣಿಗೆ ಎಂಬುದು ನಿರಂತರವಾಗಿ ಓದುವುದನ್ನು ಬಯಸುತ್ತದೆ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಹೇಳಿದರು.

ನಗರದ ಕರ್ನಾಟಕ ಸಂಘದ ಕೆ.ಟಿ.ಶಿವಲಿಂಗಯ್ಯ ಸಭಾಂಗಣದಲ್ಲಿ ಆಯೋಜಿಸಿದ್ದ ಡಾ.ಎಂ.ಎಸ್.ಅನಿತಾ ರಚಿತ ’ಅವ್ವ ಕಾಯುತ್ತಿದ್ದಾಳೆ’ ಕೃತಿಯ ಹಿಂದಿ ಅನುವಾದ ಅಮ್ಮರಾಹ್ ದೇಖ್ ರಹೀ ಹೈ ಪುಸ್ತಕ ಬಿಡುಗಡೆ ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು, ನಿರಂತರ ಬರವಣಿಗೆಯಲ್ಲಿ ಉತ್ತಮವಾದ ಶೈಲಿಯನ್ನು ವೃದ್ಧಿಸುತ್ತದೆ. ಒಂದು ಪುಸ್ತಕವನ್ನು ಅಧ್ಯಯನ ಮಾಡಿದರೆ ನಮಗೆ ಹೊಸ ಭಾವನೆಗಳನ್ನು ನೀಡುತ್ತದೆ ಎಂದರು.

ಅನಿತಾ ಅವರು ಕವಯಿತ್ರಿಯಾಗಿ ಬರವಣಿಗೆಯ ಲೋಕವನ್ನು ಪ್ರವೇಶ ಮಾಡಿದ್ದಾರೆ. ಅವರ ಸ್ನೇಹಿತೆ ಪುಸ್ತಕವನ್ನು ಅನುವಾದಿಸಿ ಅವರನ್ನು ವಿಸ್ತರಿಸುವಂತಹ ಕಾರ್ಯವನ್ನು ಮಾಡಿದ್ದಾರೆ. ಇದೇ ರೀತಿಯ ಉತ್ತಮ ಪುಸ್ತಕಗಳನ್ನು ಮತ್ತಷ್ಟು ಬರೆಯಲಿ, ಯಶಸ್ಸು ಸಿಗಲಿ ಎಂದು ಶುಭ ಹಾರೈಸಿದರು.

ಮೈಸೂರು ವಿಶ್ವವಿದ್ಯಾನಿಲಯದ ಹಿಂದಿ ವಿಭಾಗದ ನಿವೃತ್ತ ಪ್ರಾಧ್ಯಾಪಕಿ ಪ್ರತಿಭಾ ಮೊದಲಿಯಾರ್, ಲೇಖಕಿಯರಾದ ಡಾ.ಎಂ.ಎಸ್.ಅನಿತಾ, ಡಾ.ಶಾಫಿಯ, ಎಂ.ಯು.ಶ್ವೇತಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net