

ಮೂಲ್ಕಿ: ವಿದ್ಯೆಯಿಂದ ಸ್ವಾವಲಂಬಿ ಬದುಕು ಕಟ್ಟಲು ಸಾಧ್ಯ. ಈ ನಿಟ್ಟಿನಲ್ಲಿ ಬಿರುವೆರ್ ಕುಡ್ಲದ ಸೇವಾ ಕಾರ್ಯ ಜನಮಾನಸದಲ್ಲಿ ಉಳಿಯುವಂತಾಗಿದೆ ಎಂದು ಮೂಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ವಾಮನ್ ಕೋಟ್ಯಾನ್ ನಡಿಕುದ್ರು ಹೇಳಿದರು.
ಬಿರುವೆರ್ ಕುಡ್ಲ ಮೂಲ್ಕಿ ಘಟಕದ ವತಿಯಿಂದ ಆರ್ಥಿಕವಾಗಿ ಹಿಂದುಳಿದ ಆಯ್ದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸವಲತ್ತುಗಳಾದ ಪುಸ್ತಕ, ಬ್ಯಾಗ್ ವಿತರಿಸಿ ಮಾತನಾಡಿದರು.
ಉದ್ಯಮಿ ಶಿವರಾಮ ಜಿ.ಅಮೀನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಘಟಕಾಧ್ಯಕ್ಷ ಕಿಶೋರ್ ಜೆ.ಸಾಲ್ಯಾನ್ ಬಪ್ಪನಾಡು ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಗಿರಿಧರ್ ಅಮೀನ್, ಬಿಲ್ಲವ ಸಂಘದ ಪ್ರಧಾನ ಕಾರ್ಯದರ್ಶಿ ಜಯಕುಮಾರ್ ಕುಬೇವೂರು, ಉಮೇಶ್ ಮಾನಂಪಾಡಿ, ತಾರಾನಾಥ್ ಎನ್.ಮೂಲ್ಕಿ, ಕಿಶೋರ್ ಅಂಚನ್, ರಮಾನಾಥ ಸುವರ್ಣ, ಮಾಧವ್ ಪೂಜಾರಿ ಕಿಲ್ಪಾಡಿ, ಶ್ರೀಕಾಂತ್ ಕೊಕ್ಕಾರಕಲ್, ಶಂಕರ್ ಪಡುಬೈಲ್, ವಿಶ್ವನಾಥ್, ಆದರ್ಶ್ ಮಾನಂಪಾಡಿ, ಜಗದೀಶ್ ಕಕ್ವ, ಅಶೋಕ್ ಕೊಕ್ಕರಕಲ್ ಉಪಸ್ಥಿತರಿದ್ದರು. ಸತೀಶ್ ಕಿಲ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ಗಿರಿಧರ್ ಅಮೀನ್ ವಂದಿಸಿದರು.