

ಕುಶಾಲನಗರ:
ಇತಿಹಾಸ ನೆನಪುಗಳನ್ನು ಜೀವಂತವಾಗಿರಿಸುತ್ತದೆ. ಇತಿಹಾಸ ಅರಿಯದವನು ಬದುಕಲಿರುವ ಹಕ್ಕನ್ನು ಕಳೆದುಕೊಳ್ಳುತ್ತಾನೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಹೇಳಿದರು. ಕುಶಾಲನಗರ ಸಮೀಪದ ಚಿಕ್ಕಅಳುವಾರದ ಕೊಡಗು ವಿಶ್ವವಿದ್ಯಾಲಯದಲ್ಲಿ ಹಾರಂಗಿ ಸಭಾಂಗಣದಲ್ಲಿ ಸೋಮವಾರ ದಲಿತ ಸಾಹಿತ್ಯ ಪರಿಷತ್ತು, ಕೊಡಗು ವಿಶ್ವವಿದ್ಯಾಲಯ, ಮಾನವ ಬಂಧುತ್ವ ವೇದಿಕೆ, ಸಹಮತ ವೇದಿಕೆ ಹಾಗೂ ಅಹಿಂದ ಒಕ್ಕೂಟ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಏರ್ಪಡಿಸಿದ್ದ ಸಮಗ್ರ-ಸಮತೆಯೆಡೆಗೆ ಸಾಹಿತ್ಯ ಎಂಬ ವಿಷಯದ ರಾಷ್ಟಿçÃಯ ವಿಚಾರ ಸಂಕಿರಣದಲ್ಲಿ ಸಾಹಿತಿ ಅರ್ಜುನ್ ಮೌರ್ಯ ಅವರ "ಬೆಂದೊಡಲ ಕುಣಿತ" ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ವಿಜ್ಞಾನ-ತಂತ್ರಜ್ಞಾನ ರಂಗದಲ್ಲಿ ಮುಂದುವರಿದಿದ್ದೇವೆ ಎಂದು ಹೇಳಿಕೊಳ್ಳುವ ನಾವೇ ಶಿಕ್ಷಣ ರಂಗದಲ್ಲಿ ಕಳೆದ 75ವರ್ಷಗಳಲ್ಲಿ ಹಿಂದುಳಿದವರಾಗಿಯೇ ಉಳಿದಿದ್ದೇವೆ. ಶಿಕ್ಷಣದಿಂದ ಮಾತ್ರ ಸಮಾಜದ ಬದಲಾವಣೆ ಸಾಧ್ಯ ಎಂದು ಮಹಾನಾಯಕ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಪಾದಿಸಿದ್ದರು. ಮಹಿಳೆಯರ ಸುರಕ್ಷತತೆ ಮತ್ತು ಸಮಾನತೆಯ ದೃಷ್ಟಿಯಲ್ಲಿ ನಮ್ಮ ರಾಷ್ಟç ಇನ್ನೂ ಹಿಂದುಳಿದ ರಾಷ್ಟçಗಳ ಪಟ್ಟಿಯಲ್ಲೇ ಉಳಿದಿದೆ. ಶಿಕ್ಷಣ ಎಂಬುದು ಶೋಷಣೆಯನ್ನು ಪ್ರಶ್ನಿಸಲು ಕಲಿಸುತ್ತದೆ. ಆದರೆ, ಇಂದು ನಾವು ಪ್ರಶ್ನಿಸಲು ಇರುವ ಹಕ್ಕನ್ನೇ ಪರೋಕ್ಷವಾಗಿ ಕಳೆದುಕೊಳ್ಳುತ್ತಿದ್ದೇವೆ. ನಾವು ತಿಳಿದೂ ತಿಳಿಯದೆಯೂ ಗುಲಾಮಗಿರಿಗೆ ದೂಡಲ್ಪಡುತ್ತಿದ್ದೇವೆ ಎಂದರು.
ಚಾಮರಾಜನಗರ ವಿಶ್ವವಿದ್ಯಾಲಯದ ಕುಲಪತಿ ಡಾ. ಎ.ಆರ್. ಗಂಗಾಧರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸಾಹಿತ್ಯ ಮನುಷ್ಯ ವಿರೋಧಿಯಾಗಿರಲು ಸಾಧ್ಯವಿಲ್ಲ. ಮನುಷ್ಯ ವಂಶದ ಉದ್ಧಾರ ಮತ್ತು ಏಳಿಗೆ ಸಾಹಿತ್ಯದ ಮೂಲಕ ಮಾತ್ರ ಸಾಧ್ಯವಾಗಿದೆ. ಸಾಹಿತ್ಯ ಸಮಾಜವನ್ನು ಒಡೆಯುವಂಥದು ಆಗಬಾರದು. ಸಾಹಿತ್ಯ ಮನುಷ್ಯನನ್ನು ಒಂದುಗೂಡಿಸುವAಥದ್ದಾಗಬೇಕು. ದೇಶದ ಸ್ವಾಭಿಮಾನ ಮತ್ತು ಹೆಮ್ಮೆ ಭೌತಿಕ ಸೌಕರ್ಯಗಳಿಂದ ಅಳೆಯಬಾರದು. ದೇಶದ ಸ್ವಾಭಿಮಾನ ಮತ್ತು ಘನತೆಗೆ ಸಾಹಿತ್ಯ ಅಳತೆಗೋಲು ಆಗಬೇಕು ಎಂದು ಹೇಳಿದರು.
ಕೊಡಗು ವಿಶ್ವವಿದ್ಯಾಲಯ ಉಪಕುಲಪತಿ ಡಾ. ಅಶೋಕ ಸಂಗಪ್ಪ ಆಲೂರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಅಭಿವೃದ್ಧಿಯೆಂಬುದು ಶಿಕ್ಷಣದಿಂದ ಮಾತ್ರ ಸಾಧ್ಯ. ಮೌಲ್ಯಯುತ ಶಿಕ್ಷಣವೇ ಇಂದಿನ ಅಗತ್ಯ. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಶಿಕ್ಷಣದ ಮೂಲಕ ಮೌಲ್ಯಯುತ ಸಮಾಜವದ ಕನಸು ಕಂಡಿದ್ದರು ಎಂದರು.
ಸಮಾರೋಪ ಭಾಷಣ ಮಾಡಿದ ಸಾಮಾಜಿಕ ಚಿಂತಕ ವಿ.ಪಿ. ಶಶಿಧರ್ ಮಾತನಾಡಿ ಮಾನವ ಪ್ರೀತಿ ಮತ್ತು ಮಾನವ ಐಕ್ಯತೆಗೆ ಸಾಹಿತ್ಯಗಳು ನೆರವಾಗಿವೆ. ಸಾಹಿತ್ಯಗಳು ನಮ್ಮನ್ನು ಉತ್ತಮ ಸಮಾಜದೆಡೆಗೆ ಕೈಹಿಡಿದು ನಡೆಸಿಕೊಂಡು ಹೋಗುತ್ತದೆ. ನಮ್ಮ ಸಮಾಜವು ಅತಿಯಾದ ಅಗ್ನಿ ಪರೀಕ್ಷೆಯನ್ನು ಎದುರು ನೋಡುತ್ತಿದೆ. ಯುದ್ಧಗಳು ಸಮಸ್ಯೆಗೆ ಪರಿಹಾರವಾಗುವುದಿಲ್ಲ ಎಂದು ಹೇಳಿದರು.
ಹರೀಶ್ ಮಾಗಲುರವರ ಪರಿವರ್ತನಾ ಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಅರ್ಜುನ್ ಮೌರ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ.ಜಿ. ರಮ್ಯ ಬಿಡುಗಡೆಗೊಂಡ ಕೃತಿಯ ವಿಮರ್ಶೆ ನಡೆಸಿಕೊಟ್ಟರು. ಡಾ. ಹೇಮಂತ್, ಡಾ. ಜಮೀರ್ ಅಹಮದ್, ಪಿ.ಕೆ. ಅಬ್ದುಲ್ ರೆಹೆಮಾನ್ ಪ್ರತಿಮಾ ರೈ ಮತ್ತಿತರರು ಇದ್ದರು.