

ಹುಬ್ಬಳ್ಳಿ : ಹಳೇ ಹುಬ್ಬಳ್ಳಿ ಹೆಗ್ಗೇರಿಯಲ್ಲಿರುವ ಆಯುರ್ವೇದ ಮಹಾವಿದ್ಯಾಲಯದ ಸಂಹಿತ ಸಿದ್ಧಾಂತ ವಿಭಾಗದ ವತಿಯಿಂದ ಮಾ. 21ರಂದು ಬೆಳಗ್ಗೆ 9.30 ರಿಂದ ಸಂಜೆ 4.30 ರವರೆಗೆ ಮುಟ್ಟು ನಿಂತಿರುವ ಮಹಿಳೆಯರಲ್ಲಿ ಕಂಡುಬರುವ ಎಲುಬು ಕೀಲು ನೋವು, ಸಂಧಿ ನೋವು, ಬೆನ್ನು ನೋವು, ಮೊಣಕಾಲು ನೋವು, ಕೂದಲು ಉದುರುವಿಕೆ ಮತ್ತು ದೌರ್ಬಲ್ಯತೆಗಳಂತಹ ಕಾಯಿಲೆಗಳಿಗೆ ವಿಶೇಷ ಎಲುಬು ಸಾಂದ್ರತೆ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ.
ವೆದ್ಯಕಿಯ ಸೌಲಭ್ಯಗಳನ್ನು ಉಚಿತವಾಗಿ ನೀಡಲಾಗುವುದು. ಆಸಕ್ತ ರೋಗಿಗಳು ಈ ಶಿಬಿರದ ಸದುಪಯೋಗಪಡೆದುಕೊಳ್ಳಲು ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಪ್ರಶಾಂತ ಎ.ಎಸ್. ತಿಳಿಸಿದ್ದಾರೆ.