

ಉಡುಪಿ: ಮಾಹೆ ಮಣಿಪಾಲದ ಕಸ್ತೂರ್ಬಾ ವೈದ್ಯಕಿಯ ಕಾಲೇಜು ಮತ್ತು ಆಸ್ಪತ್ರೆಗೆ ಮಣಿಪಾಲ್ ಫೌಂಡೇಷನ್ ಕೊಡುಗೆಯಾಗಿ ನೀಡಿದ ಬೋನ್ ಬ್ಯಾಂಕ್(ಮೂಳೆ ನಿಧಿ) ಅನ್ನು ಮಣಿಪಾಲ ಶಿಕ್ಷಣ ಮತ್ತು ವೈದ್ಯಕಿಯ ಸಮೂಹದ ಮುಖ್ಯಸ್ಥ ಡಾ. ರಂಜನ್ ಆರ್. ಪೈ ಭಾನುವಾರ ಉದ್ಘಾಟಿಸಿದರು. ಕೆಎಂಸಿ ಕಾಲೇಜು ಮತ್ತು ಆಸ್ಪತ್ರೆಗೆ ಅಭಿನಂದನೆ ಸಲ್ಲಿಸಿದ ಅವರು, ಯಶಸ್ಸು ಸಿಗಲೆಂದು ಹಾರೈಸಿದರು.
ಮಣಿಪಾಲ ಫೌಂಡೇಷನ್ ಸಿಇಒ ಡಾ.ಹರಿನಾರಾಯಣ ಶಮಾರ್ ಮಾತನಾಡಿ, ಮಣಿಪಾಲ ನೆಟ್ವರ್ಕ್ನ ಆಸ್ಪತ್ರೆಗಳಲ್ಲಿ ಈ ಬೋನ್ ಬ್ಯಾಂಕ್ ಪ್ರಥಮವಾಗಿದೆ. ಈ ಮೂಲಕ ಉತ್ತರ ಕರಾವಳಿ ಕರ್ನಾಟಕದಲ್ಲಿ ರೋಗಿಗಳಿಗೆ ಉಪಯುಕ್ತವಾಗಲಿದೆ ಎಂದರು.
ಗುಣಮಟ್ಟದ ಚಿಕಿತ್ಸೆ
ಮಾಹೆ ಮಣಿಪಾಲದ ಉಪಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ) ಎಂ.ಡಿ. ವೆಂಕಟೇಶ್ ಮಾತನಾಡಿ, ದಾನಿಯ ಮೂಳೆಯ ಸಂಸ್ಕರಣೆ, ಕ್ಷ&ಕಿರಣ -ಸೋಂಕು ನಿವಾರಕ ಪ್ರಕ್ರಿಯೆ ವೆಚ್ಚದ ಹೊರತಾಗಿಯೂ ವಾಣಿಜ್ಯಿಕವಾಗಿ ಲಭ್ಯವಿರುವ ಪರ್ಯಾಯಗಳಿಗಿಂತ ಬೋನ್ ಬ್ಯಾಂಕ್ನ ಅಲೋಗ್ರಾಫ್ಟ್ ಅಗ್ಗವಾಗಿರುತ್ತದೆ. ಅಲ್ಲದೆ, ಗುಣಮಟ್ಟದ್ದಾಗಿರುತ್ತದೆ ಎಂದರು.
ಮಣಿಪಾಲದಲ್ಲೇ ಸೌಲಭ್ಯ
ಮಣಿಪಾಲದಲ್ಲಿ ಬೋನ್ ಬ್ಯಾಂಕ್ ಆರಂಭಿಸಲು ಶ್ರಮಿಸಿದ ಎಲ್ಲರಿಗೂ ಮಾಹೆ ಮಣಿಪಾಲದ ಸಹ ಉಪಕುಲಪತಿ (ಆರೋಗ್ಯ ವಿಜ್ಞಾನ) ಡಾ. ಶರತ್ಕುಮಾರ್ ರಾವ್- ಅಭಿನಂದನೆ ಸಲ್ಲಿಸಿ ಮಾತನಾಡಿ, ದೊಡ್ಡ ದೊಡ್ಡ ನಗರಗಳಲ್ಲಿ ಮಾತ್ರ ದೊರಕುವಂತಹ ಸೌಲಭ್ಯ ಈಗ ಮಣಿಪಾಲದಲ್ಲಿ ಸಿಗುವಂತಾಗಿದೆ ಎಂದರು.
ಮೂಳೆ ಮತ್ತು ಕೀಲು ವಿಭಾಗದ ಪ್ರಾಧ್ಯಾಪಕ ಹಾಗೂ ಬೋನ್ ಬ್ಯಾಂಕ್ನ ಸಂಚಾಲಕ ಡಾ. ಮೋನಪ್ಪ ನಾಯ್ಕ್ ಆರೂರು, ಬೋನ್ ಬ್ಯಾಂಕ್ ಕುರಿತು ವಿವರವಾದ ಮಾಹಿತಿ ನೀಡಿದರು.
ಶ್ರುತಿ ಆರ್. ಪೈ, ಡಾ. ಗಿರಿಧರ್ ಕಿಣಿ, ಕುಲಸಚಿವ ಮಾಹೆ, ಸಿ.ಜಿ. ಮುತ್ತಣ್ಣ ಸಿಒಒ ಮಾಹೆ, ಮಾಹೆ ಮಣಿಪಾಲದ ಬೋಧಕ ಆಸ್ಪತ್ರೆಯ ಸಿಒಒ ಡಾ.ಆನಂದ ವೇಣುಗೋಪಾಲ್, ಎಲ್ಲ ಸಹ ಡೀನ್ಗಳು, ಮೂಳೆ ಮತ್ತು ಕೀಲು ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ.ಶ್ಯಾಮಸುಂದರ್ ಭಟ್, ಉಪಸ್ಥಿತರಿದ್ದರು.