ಬಾಂಧವ್ಯ ಬೆಸೆಯುವ ರಕ್ಷಾಬಂಧನ

WhatsApp Image 2022-08-11 at 1.47.51 PM
ವಿಜಯಪುರ ನಗರದ ಶಾಂತಿನಿಕೇತನ ಶಿಕ್ಷಣ ಸಂಸ್ಥೆಯ ಮಕ್ಕಳು ಗುರುವಾರ ರಕ್ಷಾಬಂಧನ ಹಬ್ಬದ ಅಂಗವಾಗಿ ಸೈನಿಕ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗೆ ರಾಖಿ ಕಟ್ಟಿದ ಸಂದರ್ಭ.
Published on

ವಿಜಯಪುರ :ನಗರದ ಶಾಂತಿನಿಕೇತನ ಶಿಕ್ಷಣ ಸಂಸ್ಥೆಯ ಮಕ್ಕಳು ಗುರುವಾರ ರಕ್ಷಾಬಂಧನ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದರು.

ನಗರದ ಸೈನಿಕ ಶಾಲೆಗೆ ಭೇಟಿ ನೀಡಿ ಅಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ರಾಖಿಯನ್ನು ಕಟ್ಟಿದರು.

ಇದೇ ವೇಳೆ ಮಾತನಾಡಿದ ಶಾಂತಿನಿಕೇತನ ಶಾಲೆಯ ಪ್ರಾಚಾರ್ಯ ಶ್ರೀಧರ ಕುರಬೆಟ, ರಕ್ಷಾಬಂಧನ ಹಬ್ಬದ ವೈಶಿಷ್ಟೃವೆನೆಂದರೆ ಸಹೋದರನಾದವನು ತನ್ನ ಸಹೋದರಿಯ ರಕ್ಷಣೆಯನ್ನು ಮಾಡುವುದು ಅವನ ಕರ್ತವ್ಯವಾಗಿದೆ ಎಂಬುದನ್ನು ತಿಳಿಸಿಕೊಡುತ್ತದೆ. ಭಾರತ ದೇಶವು ಇಡೀ ಜಗತ್ತಿಗೆ ಸಹೋದರತ್ವ ಭಾವನೆಯನ್ನು ತಿಳಿಸಿಕೊಟ್ಟಿದೆ. ಇಂದಿನ ಆಧುನಿಕ ಕಾಲದಲ್ಲಿ ಸಹೋದರರ ಮತ್ತು ಸಹೋದರಿಯರ ಸಂಬಂಧಗಳು ಕಳೆದು ಹೋಗುತ್ತಿವೆ. ಇಂತಹ ಸಂಬಂಧವನ್ನು ಈ ಹಬ್ಬವು ಬೆಸೆಯುತ್ತಿದೆ ಎಂದು ನುಡಿದರು.

ಸೈನಿಕ ಶಾಲೆಯ ಪ್ರಾಚಾರ್ಯೆ ಪ್ರತಿಭಾ ಬಿಸ್ಟ್ ಅವರಿಗೆ ಶಾಂತಿನೀಕೇತನ ಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು.

ಶಾಲಾ ಸಂಯೋಜಕಿ ಪೂಜಾ ಖನಗೆ, ಶಿಕ್ಷಕರಾದ ಕವಿತಾ, ಶಶಿಧರ ಲೋನಾರಮಠ, ಎಸ್.ಬಿ.ಸತ್ತಿಕರ, ಶ್ರೀದೇವಿ ಜೋಳದ, ಸವಿತಾ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net