

ಮಂಗಳೂರು: ಬೋಂದೆಲ್ ಮಹಾತ್ಮ ನಗರದಲ್ಲಿ ಭಾನುವಾರ ವಿಶ್ವ ಪರಿಸರ ದಿನಾಚರಿಸಲಾಯಿತು.
ಗೃಹ ರಕ್ಷಕ ದಳದ ಸಮಾದೇಷ್ಟ ಡಾ.ಮುರಲೀ ಮೋಹನ್ ಚೂಂತಾರು ಹಾಗೂ ಇಲಾಖೆಯ ಸಿಬ್ಬಂದಿಗಳು ಆಗಮಿಸಿದ್ದರು. ಮಹಾತ್ಮನಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಮಚಂದ್ರ ಭಟ್ಟ, ಪರಿಸರವಾದಿ ಕೃಷ್ಣಪ್ಪ ಅವರು ಅತಿಥಿಗಳ ಪರಿಚಯ ಮಾಡಿ ಸ್ವಾಗತಿಸಿದರು.
ಇನ್ನರ್ ವೀಲ್ ಕ್ಲಬ್ ಮಂಗಳೂರು ಉತ್ತರದ ಪದಾಧಿಕಾರಿಗಳಾದ ವಸಂತಿ ಕಾಮತ್, ಪ್ರಥ್ವಿ ಸ್ವಯಂ ಸೇವಕ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ಲೋಲಾಕ್ಷಿ ಫನಾರ್ಂಡಿಸ್, ಸದಸ್ಯರಾದ ಅಲ್ಬೆನ್,ಪ್ರಕಾಶ್, ಅಕ್ಷಯ್ , ಕೆ.ಎಚ್.ಬಿ ಸದಸ್ಯರಾದ ಬಿ.ಎಂ. ಅಚಾರ್ಯ, ಮಾಜಿ ಯೋಧ ಪ್ರವೀಣ, ಸಂತೋಷ್, ಮಹಾತ್ಮ ನಗರ ಬಡಾವಣೆಯ ಪ್ರಮೀಳ, ರವಿ ,ಪ್ರಸನ್ನ, ಸುಭಾಷ್, ಪ್ರಾಪ್ತಿ ಭೂಮಿ, ಸಚೀದೇವಿ, ಬಿ.ವಿ. ಜಯರಾಮ್ ಮೊದಲಾದವರಿದ್ದರು. 50 ಕ್ಕೂ ಮಿಕ್ಕಿ ಗಿಡಗಳನ್ನು ನೆಡಲಾಯಿತು. ಸುಪ್ರೀಮ್ ಮೋಟಾರ್ ನ ಪ್ರಕಾಶ್ ಉಪಾಹಾರದ ಪ್ರಾಯೋಜಕತ್ವ ವಹಿಸಿದ್ದರು.
ಲೋಹಿತ್ ಅಮೀನ್ ಗಿಡಗಳನ್ನು ಅರಣ್ಯ ಇಲಾಖೆಯಿಂದ ಒದಗಿಸಿ ಜೆ ಸಿ ಬಿ ಮೂಲಕ ಇಂಗು ಗುಂಡಿ,ಹಾಗೂ ಗಿಡ ನೆಡುವ ಗುಂಡಿಯ ವ್ಯವಸ್ಥೆ ಮಾಡಿದ್ದರು. ಪರಿಸರವಾದಿ ಕೃಷ್ಣಪ್ಪ ಒದಗಿಸಿದ ಸಸ್ಯ ಸಂರಕ್ಷಣೆಯ ಅನೇಕ ಫಲಕ ಹಾಗೂ ಭಿತ್ತಿಪತ್ರ ಪತ್ರದ ಮೂಲಕ ಮಕ್ಕಳು ಹಾಗೂ ಪಾಲ್ಗೊಂಡಿದ್ದ ಜನರಲ್ಲಿ ಪರಿಸರ ಕಾಳಜಿ ಮತ್ತು ಜಾಗೃತಿ ಮೂಡಿಸಲಾಯಿತು.