ಶಾಲಾ ಕೊಠಡಿ ನಿರ್ಮಾಣಕ್ಕೆ ಶಿಲಾನ್ಯಾಸ

bondala
Published on

ಬಂಟ್ವಾಳ: ತಾಲೂಕಿನ ಬೊಂಡಾಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಂಆರ್‌ಪಿಎಲ್ ಸಂಸ್ಥೆ ಅನುದಾನದಿಂದ ನಿರ್ಮಾಣಗೊಳ್ಳಲಿರುವ ನೂತನ ಶಾಲಾ ಕೊಠಡಿಗೆ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು.

ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ್ ಭಟ್ ಕಲ್ಲಡ್ಕ ಶಿಲಾನ್ಯಾಸ ನೆರವೇರಿಸಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಜನಾರ್ದನ ಕುಲಾಲ್ ಅಧ್ಯಕ್ಷತೆ ವಹಿಸಿದ್ದರು. ಪಳನೀರು ಅನಂತ ತಂತ್ರಿಗಳ ಪೌರೋಹಿತ್ಯದಲ್ಲಿ ಭೂಮಿಪೂಜೆ ಜರುಗಿತು. ತಾಲೂಕು ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಶಾಲೆಯ ಪ್ರಭಾರ ಮುಖ್ಯಶಿಕ್ಷಕಿ ರೇಖಾ ಸಿ.ಎಚ್.ಅವರನ್ನು ಸನ್ಮಾನಿಸಲಾಯಿತು. ವಿಟ್ಲ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಬಂಟ್ವಾಳ ಪುರಸಭಾ ಸದಸ್ಯ ಗೋವಿಂದ ಪ್ರಭು, ಪ್ರಮುಖರಾದ ದಿನೇಶ್ ಅಮ್ಟೂರ್, ಜಯರಾಮ್ ಹೊಳ್ಳ, ಶ್ರೀಧರ್ ಶೆಟ್ಟಿ ಬೊಂಡಾಲ, ಕೊರಗಪ್ಪ ಬಂಗೇರ, ವಿವೇಕಾನಂದ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿನೋದ್ ಶೆಟ್ಟಿ, ಶಿವರಂಜಿನಿ ಕಲಾಕೇಂದ್ರ ಬೊಕ್ಕಸದ ಸಂಚಾಲಕಿ ಶಾರದಾ ಎಸ್.ರಾವ್, ಸಂಸ್ಕೃತ ಗುರು ದೇವರಾಜ್ ಮಂಗಳೂರು, ಶಿವಾನಂದ ಬೊಂಡಾಲ, ಬೊಂಡಾಲ ಜನ ಸೇವಾ ಸಮಿತಿ ಸಂಚಾಲಕ ಗಿರಿಧರ್ ಬಿ.ಪಿ.ಉಪಸ್ಥಿತರಿದ್ದರು. ಶಾಲಾಶಿಕ್ಷಕಿ ಲಾವಣ್ಯ ಸ್ವಾಗತಿಸಿ, ಪ್ರಭಾರ ಮುಖ್ಯಶಿಕ್ಷಕಿ ರೇಖಾ ಸಿ.ಎಚ್.ವಂದಿಸಿ, ಶಿಕ್ಷಕಿ ಸೌಮ್ಯಾ ನಿರೂಪಿಸಿದರು. ಶಿಕ್ಷಕಿಯರಾದ ಭವ್ಯ ಹಾಗೂ ಕಿಶೋರಿ ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net