ರಾಜಸ್ಥಾನ ಸಮಾಜ ಬಂಧುಗಳ ಮತಯಾಚನೆ ಮಾಡಿದ ಬಸವರಾಜ ಬೊಮ್ಮಾಯಿ

IMG-20240425-WA0021
Published on

ನನಗೆ ಮತ ಹಾಕಿ, ನಾನು ನಿಮ್ಮೊಂದಿಗಿರುತ್ತೇನೆ: ಬಸವರಾಜ ಬೊಮ್ಮಾಯಿ

ಗದಗ: ರಾಜಸ್ಥಾನಿ ಸಮಾಜ ಬಂಧುಗಳು ಎಲ್ಲಿಯೇ ವ್ಯಾಪಾರಕ್ಕೆ ಹೋದರೂ ಅಲ್ಲಿಯವರೊಂದಿಗೆ ಬೆರೆತು ಸ್ಥಳೀಯರೇ ಆಗುವ ಗುಣ ಹೊಂದಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ‌ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿಯವರು ಹೇಳಿದ್ದಾರೆ.
ಅವರು ಇಂದು ಗದಗನಲ್ಲಿ ರಾಜಸ್ಥಾನ ಸಮಾಜ ಬಂಧುಗಳ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶಕ್ಕಾಗಿ ಹೇಗೆ ಸೈನಿಕ ದೇಶಭಕ್ತಿ, ಶಿಸ್ತಿನಿಂದ‌‌ ಕೆಲಸ ಮಾಡುತ್ತಾರೊ ಅದೇ ರೀತಿ ರಾಜಸ್ಥಾನ ಸಮಾಜದ ಕಾಂತಿಲಾಲ್ ಬನ್ಸಾಲಿ ಕೆಲಸ ಮಾಡುತ್ತಾರೆ.‌ ಗದಗನಲ್ಲಿ ಬಿಜೆಪಿ ಯನ್ನು ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ರಾಜಸ್ಥಾನದಿಂದ ಇಲ್ಲಿ ಬಂದು ತಮ್ಮ ಜೀವನ ಕಟ್ಟಿಕೊಂಡಿದ್ದಾರೆ. ರಾಜಸ್ಥಾನಿಯರು ಯಾವುದೇ ಭಾಗಕ್ಕೆ ಹೋಗಲಿ ಅವರು ಅಲ್ಲಿಯವರಾಗಿ ಅಲ್ಲಿನ ಜನರೊಂದಿಗೆ ಬೆರೆಯುವ ಗುಣ ಹೊಂದಿದ್ದಾರೆ. ಎಲ್ಲರೂ ಬಿಜೆಪಿಗೆ ಬೆಂಬಲ ಸೂಚಿಸಿದ್ದಕ್ಕೆ ಧನ್ಯವಾದಗಳು. ಗದಗ ಹಾವೇರಿಯಲ್ಲಿ ನೀರಾವರಿ ಹಾಗೂ ಕೈಗಾರಿಕೊದ್ಯಮ ಅಭಿವೃದ್ಧಿ ಪಡಿಸುವ ಉದ್ದೇಶ ಹೊಂದಿದ್ದೇನೆ. ಇದರಿಂದ ನಿಮ್ಮ ವ್ಯಾಪಾರ ವಹಿವಾಟು ಹೆಚ್ಚಳವಾಗುತ್ತದೆ. ಇಡೀ ದೇಶಕ್ಕೆ ಮೋದಿಯೊಬ್ಬರೇ ದೇಶವನ್ನು ಮುನ್ನಡೆಸುವ ಸಾಮರ್ಥ್ಯ ಹೊಂದಿದ್ದಾರೆ. ರಾಹುಲ್ ಗಾಂಧಿಗೆ ದೇಶ ಮುನ್ನಡೆಸುವ ಸಾಮರ್ಥ್ಯ, ಕ್ಷಮತೆ ಇಲ್ಲ. ನೀವು ನನ್ನನ್ನು ಬೆಂಬಲಿಸಿ ನಾನು ನಿಮ್ಮ ಜೊತೆಗಿರುತ್ತೇನೆ ಎಂದು ಹೇಳಿದರು.
ರಾಜಸ್ಥಾನ ಸಮಾಜದ ಕಾಂತಿಲಾಲ್ ಜೈನ್, ಬಹುಲಾಲ್ ಜೈನ್ ಹಾಗೂ ಮತ್ತಿತರ ಪ್ರಮುಖರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net