

ವಿಜಯವಾಣಿ ಸುದ್ದಿಜಾಲ ದೇವನಹಳ್ಳಿ
ಕಸಬಾ ಹೋಬಳಿಯ ಬೊಮ್ಮವಾರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 2022-2023ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಭೆ ಸಂಘದ ಆವರಣದಲ್ಲಿ ಸಂಘದ ಅಧ್ಯಕ್ಷ ಟಿ.ರವಿ ಅಧ್ಯಕ್ಷತೆಯಲ್ಲಿ ನಡೆಯಿತು.
ಪ್ರಭಾರ ಸಿಇಒ ಎಂ.ಚಂದ್ರ ವಾರ್ಷಿಕ ವರದಿ ಮಂಡಿಸಿ, 3.2 ಕೋಟಿ ಕೆಸಿಸಿ ಸಾಲ, 1.15 ಕೋಟಿ ರೂ. ಚಿನ್ನಾಭರಣ ಸಾಲ, 6.81 ಕೋಟಿ ಮಧ್ಯಮ ಅವಧಿ ಸಾಲ, ಸ್ತ್ರೀಶಕ್ತಿ ಗುಂಪುಗಳಿಗೆ 1.75 ಕೋಟಿ ಸಾಲ ವಿತರಿಸಲಾಗಿದೆ.
2022 -23 ನೇ ಸಾಲಿಗೆ 10,78,030 ಪೈಸೆ ಲಾಭ ಬಂದಿದೆ 2023-24 ನೇ ಸಾಲಿಗೆ 78,67,000 ಅಂದಾಜು ಬಜೆಟ್ ಮಾಡಲಾಗಿದ್ದು ಇದರಲ್ಲಿ 13 ಲಕ್ಷ ರೂ. ಆದಾಯ ನಿರೀಕ್ಷಿಸಲಾಗಿದೆ ಎಂದು ವರದಿ ನೀಡಿ ಸಭೆಯ ಅನುಮೊದನೆ ಪಡೆದುಕೊಂಡರು.
ವಿಶೇಷ ಆಹ್ವಾನಿತರಾಗಿ ಉಪಸ್ಥಿತರಿದ್ದ ಜಿಲ್ಲಾ ಸಹಕಾರ ಬ್ಯಾಂಕ್‌ನ ವೃತ್ತಿಪರ ನಿರ್ದೇಶಕ ಕಾಮೇನಹಳ್ಳಿ ರಮೇಶ್ ಮಾತನಾಡಿ,ಸ್ತ್ರೀ ಶಕ್ತಿ ಸಂಘಗಳಿಗೆ ಸಹಕಾರ ಸಂಘದಿಂದ ವಾರ್ಷಿಕವಾಗಿ ಕನಿಷ್ಠ ಬಡ್ಡಿ ದರದಲ್ಲಿ ಸಾಲ ನೀಡುತ್ತಿದೆ ಖಾಸಗಿ ಬ್ಯಾಂಕ್‌ಗಳಲ್ಲಿ ಹೆಚ್ಚಿನ ಬಡ್ಡಿ ದರದಲ್ಲಿ ಪಡೆಯುವ ಬದಲು ಮಹಿಳೆಯರು ಇದರ ಸದುಪಯೋಗ ಪಡೆಯಬೇಕು. ಬೊಮ್ಮವಾರ ವ್ಯವಸಾಯ ಸೇವಾ ಸಹಕಾರ ಸಂಘದಲ್ಲೆ ರಸಗೊಬ್ಬರ ನೀಡಲು ವ್ಯವಸ್ಥೆ ಮಾಡುವುದಾಗಿಯೂ ಕುರು ಕೋಳಿ ಹಸು ಸಾಕಾಣಿಕೆಗೆ ಕೃಷಿ ಸಂಬಂದಿತ ಬೆಳೆಸಾಲ ಅತೀ ಕಡಿಮೆ ಬಡ್ಡಿದರದಲ್ಲಿ ರೈತರಿಗೆ ಸಿಗಲಿದೆ ಸೂಕ್ತ ದಾಖಲಾತಿ ಭದ್ರತೆ ಇಲ್ಲದೇ ಯಾವುದೇ ಸಾಲ ನೀಡಲು ಬರುವುದಿಲ್ಲ ಎಂದು ತಿಳಿಸಿದರು.
ಬೊಮ್ಮವಾರ ವಿವಿದೊದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಉಪಾಧ್ಯಕ್ಷ ಎಚ್.ಮುನಿಕೃಷ್ಣ., ಕಾರ್ಯಕಾರಿ ಸಮಿತಿ ಸದಸ್ಯರಾದ ಎನ್.ರಾಮಮೂರ್ತಿ, ಎಸ್. ನಾಗೇಶ್, ಟಿ.ರವಿ, , ಎನ್. ನಾರಾಯಣಸ್ವಾಮಿ, ಎ.ರಾಮಾಂಜಿನಪ್ಪ, ಎನ್..ಮುನಿಯಪ್ಪ, ರಮೇಶ್, ನವೀನ್‌ಕುಮಾರ್, ಅಂಬಿಕ, ಪುಷ್ಪ, ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಚಂದ್ರ, ಬಿಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಸಿ.ಪ್ರಕಾಶ್, ಮಾರಾಟ ಗುಮಾಸ್ತ ಎನ್.ಸುರೇಶ್, ವಿಶ್ವನಾಥಪುರ ವಿಎಸ್.ಎಸ್.ಎನ್. ಸಿಇಓ ಕೃಷ್ಣಮೂರ್ತಿ , ಮಾಜಿ ಅಧ್ಯಕ್ಷರುಗಳು ಮಾಜಿ ನಿದೇರ್ಶಕರುಗಳು ಮತ್ತಿತರರು ಇದ್ದರು.