

ವಿಜಯವಾಣಿ ಸುದ್ದಿಜಾಲ ಗದಗ
ಏ. 19 ರಂದು ಹಾವೇರಿ ಕ್ಷೇತ್ರದ ಅಭ್ಯಥಿರ್ಯಾಗಿ ನಾಮಪತ್ರ ಸಲ್ಲಿಕೆ ಮಾಡಲಿದ್ದು, ಅಂದು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲ ವಿಧಾನಸಭಾ ಕ್ಷೇತ್ರಗಳಿಂದ ಸಾವಿರಾರು ಜನರು ಬರುವ ನಿರೀಕ್ಷೆ ಇದೆ ಎಂದು ಮಾಜಿ ಸಿಎಂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯಥಿರ್ ಬಸವರಾಜ ಬೊಮ್ಮಾಯಿ ಹೇಳಿದರು.
ಗದಗನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವು ಎಂಟು ಕ್ಷೇತ್ರದ ಜನರು ಕಾರ್ಯಕರ್ತರಿಗೆ ಬರಲು ಸೂಚನೆ ನೀಡಿದ್ದೇವೆ. ಸಾವಿರಾರು ಜನರು ಬರುತ್ತಾರೆ. ಅಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಪ್ರತಿಪಕ್ಷದ ನಾಯಕ ಆರ್. ಅಶೋಕ್, ಮಾಜಿ ಸಚಿವ ಬೈರತಿ ಬಸವರಾಜ, ಮುರುಗೇಶ್ ನಿರಾಣಿ ಬರುತ್ತಾರೆ ಎಂದರು. ಇದೇ ವೇಳೆ ಸಂಸದ ಕರಡಿ ಸಂಗಣ್ಣ ಬಿಜೆಪಿ ತೊರೆದಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಂಗಣ್ಣ ಅವರು ಕಾಂಗ್ರೆಸ್ ಸೇರ್ಪಡೆ ಆಗುತ್ತಿರುವುದು ದುರದುಷ್ಟಕರ. ನಾವು ಅವರ ಮನಲಿಸುವ ಕೆಲಸ ಮಾಡಿದ್ದೇವು ಕಾಂಗ್ರೆಸ್ ನವರು ಅವರಿಗೆ ಪ್ರಚೋದನೆ ಮಾಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಟಿಕೆಟ್ ಸಿಗದವರು ಬೇಸರ ಮಾಡಿಕೊಳ್ಳುವುದು ಸಹಜ. ಇದು ರಾಷ್ಟ್ರೀಯ ಚುನಾವಣೆ. ರಾಷ್ಟ್ರೀಯ ವಿಚಾರಗಳ ಮೇಲೆ ಚುನಾವಣೆ ಜರುಗುವುದರಿಂದ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ನಿಂದಲೂ ಅನೇಕ ನಾಯಕರು ಬಿಜೆಪಿಗೆ ಸೇರ್ಪಡೆ ಆಗುತ್ತಿದ್ದಾರೆ. ಬೆಳ್ಳಟ್ಟಿ ಗ್ರಾಮದಲ್ಲಿ ನೂರಾರು ಜನರು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಸ್ಥಳಿಯವಾಗಿ ಸಣ್ಣಪುಟ್ಟ ಭಿನ್ನಾಭಿಪ್ರಾಯ ಇದ್ದರೂ ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವ ಕೆಲಸ ಮಾಡುತ್ತೇವೆ ಎಂದರು.
ಸಿ.ಸಿ. ಪಾಟೀಲ ಆಕ್ರೋಶ: ಒಡೆದು ಆಳುವ ನೀತಿಯನ್ನು ಕಾಂಗ್ರೆಸ್ ಪಕ್ಷ ಚನ್ನಾಗಿ ಅಳವಡಿಸಿಕೊಂಡಿದೆ. ಸ್ವಾತಂತ್ರ ನಂತರ ದೇಶವನ್ನು, ದೇಶದ ಜನರನ್ನು ಒಡೆದು ಆಳುತ್ತಲೇ ಬಂದಿದೆ. ಕೇಂದ್ರದಲ್ಲಿ ಬಿಜೆಪಿ ಅರ್ಕಾರ ಅಧಿಕಾರಕ್ಕೆ ಬಂದ ನಂತರ ನಿಜವಾದ ಭಾರತ ಜೋಡೋ ಆರಂಭವಾಗಿದೆ. ಕಾಶ್ಮೀರದಲ್ಲಿ ಅಂಶಾಂತಿ ಮೂಡುವಂತೆ ಮಾಡಿದ್ದು ಅಮದಿನ ಕಾಂಗ್ರೆಸ್ ಸರ್ಕಾರ. ಚೀನಾ ದೇಶಕ್ಕೆ ಸಾವಿರಾರು ಕೀಮಿ ವ್ಯಾಪ್ತಿಯ ಪ್ರದೇಶ ಬಿಟ್ಟು ಕೊಟ್ಟಿದ್ದು ಕಾಂಗ್ರೆಸ್ ಸರ್ಕಾರ. ಮತಬ್ಯಾಂಕ್, ತುಷ್ಟಿಕರಣ ರಾಜಕಾರಣಕ್ಕೆ ಕಾಂಗ್ರೆಸ್ ಪಕ್ಷ ಏನು ಬೇಕಾದರೂ ಮಾಡುತ್ತದೆ ಎಂಬುದಕ್ಕೆ ಹಲವು ಉದಾಹರಣೆಗಳಿವೆ. ಕಾಶ್ಮೀರದಲ್ಲಿ ಈಗ ಶಾಂತಿ ನೆಲೆಸಿದೆ. ರಾಷ್ಟ್ರೀಯ ಹೆದ್ದಾರಿಗಳು. ವಿವಿಧ ನಗರದಲ್ಲಿ ಮೆಟ್ರೋಗಳು, ವಿಮಾನ ನಿಲ್ದಾಣಗಳ ಅಭಿವೃದ್ಧಿ, ರೈಲ್ವೆ ನಿಲ್ದಾಣಗಳ ಅಭಿವೃದ್ಧಿ ಜತೆಗೆ ಬಡ ಜನರ ಏಳ್ಗೆಗಾಗಿ ಗ್ಯಾಸ ವಿತರಣೆ ಕಾರ್ಯಕ್ರಮ, ಶೌಚಾಲಯ ನಿಮಾಣ ಕಾರ್ಯಕ್ರಮಗಳು ಕೇಂದ್ರದ ಬಿಜೆಪಿ ಸರ್ಕಅರದ ಅಭಿವೃದ್ಧಿ ಹಿಡಿದ ಕೈಗನ್ನಡಿ. 2024 ರ ನಂತರ ಬಿಜೆಪಿ ಅಧಿಕಾರದಲ್ಲಿ ದೇಶ ಹೇಗೆ ಅಭಿವೃದ್ಧಿ ಕಾಣಲಿದೆ ಎಂಬುದನ್ನು ಯುವಕರು ಯೋಚಿಸಬೇಕು. ದೇಶದ ಚುಕ್ಕಾಣಿ ಹಿಡಿಯುವ ನಾಯಕನಿಗೆ ದೂರದೃಷ್ಟಿ ಇರಬೇಕು. ಭದ್ರತೆ, ಆಥಿರ್ಕ ಸ್ಥಿತಿ, ಉತ್ತಮ ಆಡಳಿತವನ್ನು ಪ್ರಧಾನಿ ನೀಡಿದ್ದಾರೆ. ಕೇಂದ್ರದಿಂದ ಬರುವ ಅಕ್ಕಿಯನ್ನೇ ನಮ್ಮ ಭಾಗ್ಯ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಪಕ್ಷಕ್ಕೆ ಮತ ಕೇಳಲುವ ನೈತಿಕತೆ ಇಲ್ಲ. ಕಾಂಗ್ರೆಸ್ ಪಕ್ಷವು ಕೇವಲ ಅಧಿಕಾರದ ದಾಹಕ್ಕೆ ಅವೈಜ್ಞಾನಿಕ ಯೋಜನೆಗಳನ್ನು ಜಾರಿ ಮಾಡಿ ಆಥಿರ್ಕ ದಿವಾಳಿತನ ಮಾಡಿದ ಕೀತಿರ್ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ ಎಂದು ಸಿ.ಸಿ. ಪಾಟೀಲ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದರು.
ಶ್ರೀರಾಮನ ದರ್ಶನ ಪಡದೆ ಬೊಮ್ಮಾಯಿ:
ಮರ್ಯಾದಾ ಪುರುಷೋತ್ತಮ ಶ್ರೀರಾಮ ನವಮಿಯ ನಿಮಿತ್ಯ ಬುಧವಾರ ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯಥಿರ್ ಬಸವರಾಜ ಬೊಮ್ಮಾತಿ ಬೆಟಗೇರಿಯ ರ್ಟನಲ್ ಪೇಟೆಯಲ್ಲಿರುವ ಪ್ರಸಿದ್ದ ಶ್ರೀರಾಮ ಮಂದಿರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಸಾರ್ವಜನಿಕರೊಂದಿಗೆ ಶ್ರೀರಾಮನ ದರ್ಶನ ಪಡೆದ ಅವರು, ಮಂದಿರಕ್ಕೆ ಆಗಮಿಸಿದ ಭಕ್ತರೊಂದಿಗೆ ಉಭಯ ಕುಶಲೋಪರಿ ಚಚಿರ್ಸಿದರು. ಈ ಸಂದರ್ಭದಲ್ಲಿ ಅನೇಕರು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರೊಂದಿಗೆ ಪೋಟೊ ಹಾಗೂ ಸೆಲ್ಪಿ ತೆಗೆಸಿಕೊಂಡು ಖುಷಿ ಪಟ್ಟರು.