

ಕಾರ್ಕಳ: ರಾಜ್ಯದ ಮತಾಂಧ ಕಾಂಗ್ರೆಸ್ ಸರ್ಕಾರ ಗೋವು ಹಂತಕರಿಗೆ, ಕೆಚ್ಚಲು ಕುಯ್ದು ವಿಕೃತಿ ಮೆರೆದವರಿಗೆ ಮಾನಸಿಕ ಅಸ್ವಸ್ಥರೆಂದು ಪ್ರಮಾಣಪತ್ರ ನೀಡಿ ರಕ್ಷಿಸುತ್ತಿದೆ. ಬಾಂಬು ಹಾಕುವವರೆಲ್ಲರೂ ಕಾಂಗ್ರೆಸಿಗರಿಗೆ ಸಹೋದರರಾಗಿರುವುದು ವಿಪರ್ಯಾಸ ಎಂದು ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್ ಹೇಳಿದರು.
ಬೆಳ್ಮಣ್ ಮಹಾಶಕ್ತಿ ಕೇಂದ್ರದ ಬೂತ್ ಅಧ್ಯಕ್ಷ ಹಾಗೂ ಜನಪ್ರತಿನಿಧಿಗಳ, ಪಕ್ಷದ ಪ್ರಮುಖರ ಸಭೆಯಲ್ಲಿ ಮಾತನಾಡಿ, ನನ್ನ ರಾಜಕೀಯ ಜೀವನದಲ್ಲೇ ಇಂತಹ ಅಸಮರ್ಥ ಸರ್ಕಾರವನ್ನು ಕಂಡಿಲ್ಲ. ಆಡಳಿತ ಕಳ್ಳರಿಗೆ, ಭ್ರಷ್ಟರಿಗೆ ರಾಜ್ಯ ಸರ್ಕಾರವೇ ಕೃಪಾಪೋಷಿತವಾಗಿದೆ. ಬಡವರಿಗೆ ಈ ಸರ್ಕಾರದಿಂದ ಏನೂ ಪ್ರಯೋಜನವಿಲ್ಲ ಎಂದು ಲೇವಡಿ ಮಾಡಿದರು.
ಕ್ಷೇತ್ರ ಅಧ್ಯಕ್ಷ ನವೀನ್ ನಾಯಕ್, ಗೇರು ನಿಗಮದ ಮಾಜಿ ಅಧ್ಯಕ್ಷ ಮಣಿರಾಜ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ಜಯರಾಮ್ ಸಾಲ್ಯಾನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಶ್ಮಾ ಉದಯ್ ಶೆಟ್ಟಿ, ಪ್ರಮುಖರಾದ ಸೂರ್ಯಕಾಂತ್ ಶೆಟ್ಟಿ, ಶಂಕರ್ ಕುಂದರ್, ಮುಲ್ಲಡ್ಕ ರವೀಂದ್ರ ಶೆಟ್ಟಿ, ಮಹಾಶಕ್ತಿ ಕೇಂದ್ರ ಅಧ್ಯಕ್ಷ ದೇವೇಂದ್ರ ಶೆಟ್ಟಿ, ಮಂಡಲ ಪ್ರಧಾನ ಕಾರ್ಯದರ್ಶಿ ಸತೀಶ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಕಳ ವಿಧಾನಸಭಾ ಕ್ಷೇತ್ರದ ಸುಮಾರು 5000 ಬಡಜನರ ರೇಷನ್ ಕಾರ್ಡ್ ರದ್ದಾಗಲು ಶಿಫಾರಸ್ಸುಗೊಂಡಿದೆ. ಹಾಲಿನ ದರ ಏರಿಕೆಯಾದರೂ, ಒಂದು ವರ್ಷದಿಂದ ರೈತರಿಗೆ ಸಿಗುತ್ತಿದ್ದ ಹಾಲಿನ ಸಬ್ಸಿಡಿ ಇನ್ನೂ ಸಿಕ್ಕಿಲ್ಲ. ಇಂತಹ ದರಿದ್ರ ಸರ್ಕಾರದ ವಿರುದ್ಧ ಜನರೇ ಸ್ವತಃ ದಂಗೆ ಏಳಬೇಕಾದ ಪರಿಸ್ಥಿತಿ ಎದುರಾಗಿದೆ. -ಸುನೀಲ್‌ಕುಮಾರ್ ಶಾಸಕ https://www.vijayavani.net/special-gram-sabha-for-the-disabled-in-mazur https://www.vijayavani.net/gratitude-service-at-varaha-temple