

ರಾಯಚೂರು ಇತ್ತೀಚೆಗೆ ನಗರದ ಹೊರವಲಯದ ಎಕ್ಲಾಸಪೂರು ಬಡಾವಣೆಯಲ್ಲಿ ಉದ್ಘಾಟನೆಗೊಂಡಿರುವ ನೂತನ ಜಿ¯್ಲÁಡಳಿತ ಭವನದಲ್ಲಿ ಬಾಂಬï ಇಟ್ಟಿರುವುದಾಗಿ ಬೆದರಿಕೆಯು ಇ-ಮೇಲï ಮೂಲಕ ಬಂದಿರುವುದು ಆತಂಕ ಮೂಡಿಸಿದೆ.
ಶುಕ್ರವಾರ ಬೆಳಗ್ಗೆ ೯.೩೦ರ ಸುಮಾರಿಗೆ ಡಿಸಿ ಕಚೇರಿ ಮೇಲ್‌ಗೆ ಇ-ಮೇಲïಗೆ ಸಂದೇಶ ಬಂದಿರುವುದರಿAದ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಕಚೇರಿಯಿಂದ ಓಡಿ ಹೊರ ಬಂದರು.
ನೂತನ ಕಚೇರಿಯಲ್ಲಿ ಒಟ್ಟು ೬ ಇಲಾಖೆಗಳು ಕಾರ್ಯ ನಿರ್ವಹಣೆ ಮಾಡಲಾಗುತ್ತಿದ್ದು, ಜತೆಗೆ ಶುಕ್ರವಾರ ಭೂ ಮಾಪನ ಇಲಾಖೆ ಭೂ ದಾಖಲಾತಿ ಸಂಬAಽಸಿದAತೆ ಕಲಾಪ ನಡೆಯುತ್ತಿತ್ತು ಆದರೆ ಬಾಂಬ್ ಇದೆಂದು ಮಾಹಿತಿ ಬಂದಿದ್ದರಿAದ ಕಲಾಪವನ್ನು ಸ್ಥಗೀತಗೊಳಿಸಿ ಹೊರ ಬಂದಿದ್ದಾರೆ. ಮಾಹಿತಿ ಪಡೆಯುತ್ತಿದ್ದಂತೆ ಶ್ವಾನದಳ, ಬಾಂಬï ನಿಷ್ಕಿçಯ ದಳ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿz್ದÁರೆ.
ಬೇಸಿಗೆ ಹಿನ್ನೆಲೆಯಲ್ಲಿ ಬೆಳಿಗ್ಗೆ ೮ ರಿಂದ ೧ ಗಂಟೆಯವರೆಗೆ ಸರ್ಕಾರಿ ಕಚೇರಿಗಳ ಸಮಯ ನಿಗದಿ ಮಾಡಿದ್ದರಿಂದ ಸ್ವಲ್ಪ ಮುಂಚಿತವಾಗಿಯೇ ಸಿಬ್ಬಂದಿಯನ್ನು ಮನೆಗೆ ಕಳುಹಿಸಿz್ದÁರೆ. ಇ-ಮೇಲï ಬಂದಿರುವುದನ್ನು ಎಸ್ಪಿ ಎಂ.ಪುಟ್ಟಮಾದಯ್ಯ ಖಚಿತಪಡಿಸಿದ್ದು, ಪೊಲೀಸ್ ತಂಡದೊAದಿಗೆ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸುತ್ತಿz್ದÁರೆ.