

ವಿಟ್ಲ: ಎರುಂಬು ಸಿಂಹಮೂಲೆ ಬೊಳ್ನಾಡು ಶ್ರೀ ಚೀರುಂಭ ಭಗವತಿ ಕ್ಷೇತ್ರದಲ್ಲಿ ಮಾ.೯ರಿಂದ ೧೬ರವರೆಗೆ ಜರುಗುವ ಶ್ರೀ ಚೀರುಂಭ ಭಗವತೀ ಮತ್ತು ಪರಿವಾರ ದೈವಗಳ ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶೋತ್ಸವದ ಅಂಗವಾಗಿ ಭಾನುವಾರ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಮುಂಭಾಗದಿಂದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ನಡೆಯಿತು.
ವಿಟ್ಲ ರಥದ ಗದ್ದೆಯಲ್ಲಿ ಹೊರೆಕಾಣಿಕೆ ಮೆರವಣಿಗೆಗೆ ಗೋಪಾಲದಾಸ ಯಾನೆ ಕಣ್ಣ ಕಲೇಕಾರ್ ಚಾಲನೆ ನೀಡಿದರು. ಉಕ್ಕುಡದ ಭಜನಾ ಮಂದಿರ ಮುಂಭಾಗದಿಂದ ಚೆಂಡೆ, ಗೊಂಬೆ ಬಳಗ, ಭಜನೆ ತಂಡಗಳೊಂಡಿಗೆ ಭಕ್ತರು ಸಿಂಹಮೂಲೆಯ ಕ್ಷೇತ್ರದವರೆಗೆ ಪಾದಯಾತ್ರೆ ಕೈಗೊಂಡರು. ೧೦೦ಕ್ಕೂ ಅಽಕ ವಾಹನಗಳು ಹೊರೆಕಾಣಿಕೆಯನ್ನು ತುಂಬಿಕೊಂಡು ಕ್ಷೇತ್ರಕ್ಕೆ ಆಗಮಿಸಿದವು.
ಪುನರ್‌ನಿರ್ಮಾಣ ಸಮಿತಿ ಅಧ್ಯಕ್ಷ ಕೃಷ್ಣ ಎನ್. ಉಚ್ಚಿಲ್, ಅವರ ಮಾತೃಶ್ರೀ ಅಮ್ಮಣಿ ಅಮ್ಮ, ವಿವಿಧ ಕ್ಷೇತ್ರದ ಪ್ರಮುಖರು, ಕ್ಷೇತ್ರದ ಪುನರ್ ನಿರ್ಮಾಣ ಸಮಿತಿ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಪದಾಽಕಾರಿಗಳು ಮೆರವಣಿಗೆಯಲ್ಲಿ ಭಾಗವಹಿಸಿದರು.
ಇಂದಿನ ಕಾರ್ಯಕ್ರಮ: ಮಾ.೧೦ಕ್ಕೆ ಬೆಳಗ್ಗೆ ವಾಸ್ತು ಪೂಜೆ, ಭಜನೆ, ನಾಮ ಸಂಕೀರ್ತನೆ ವಿವಿಧ ಭಜನಾ ತಂಡಗಳಿಂದ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ, ಧಾರ್ಮಿಕ ಪ್ರವಚನ ಸಂಜೆ ೫ರಿಂದ ಲಕ್ಷ್ಮಣ ವೈದರ್, ೬ರಿಂದ ಟಿ.ವಿ. ಮಧುಸೂದನ್ ಪಣಿಕ್ಕರ್, ೮ರಿಂದ ಜಾನಪದ ನೃತ್ಯ ಹಾಗೂ ತಿರುವಾದಿರಂ, ೯ರಿಂದ ಸ್ವರ ಸಮರ್ಪಣೆ, ೧೦ರಿಂದ ಮಂತ್ರ ದೇವತೆ ನಾಟಕ ನಡೆಯಲಿದೆ.
೧೧ಕ್ಕೆ ಬೆಳಗ್ಗೆ ೮.೩೦ರಿಂದ ಭಜನೆ, ೧೦.೩೦ಕ್ಕೆ ಭಕ್ತಿನಿನಾದ ರಸಮಂಜರಿ, ಮಧ್ಯಾಹ್ನ ೨ರಿಂದ ಸಿಂಗಾರಿ ಮೇಳ ಹಾಗೂ ಸಾಂಸ್ಕೃತಿಕ ಕಲಾ ವೈಭವ, ೪.೩೦ಕ್ಕೆ ಕ್ಷೇತ್ರದ ತಂತ್ರಿಗಳಾದ ಉಳಿಯತ್ತಾಯ ವಿಷ್ಣು ಆಸ್ರ ಅವರ ಆಗಮನ, ದೇವತಾ ಪ್ರತಿಷ್ಠೆ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ಅಂಕುರಾರೋಹಣ, ೫ರಿಂದ ಡಾ. ಸಂಗೀತ ಕಿಶೋರ್ ಅವರಿಂದ ಧಾರ್ಮಿಕ ಪ್ರವಚನ, ೬ರಿಂದ ಗೀತಾ ಸಾಹಿತ್ಯ ಸಂಭ್ರಮ, ೮ರಿಂದ ಒರಿಯಾಂಡಲಾ ಸರಿಬೋಡು ನಾಟಕ ನಡೆಯಲಿದೆ.