ದಾನಿಗಳಿಂದ 47 ಯೂನಿಟ್ ಸಂಗ್ರಹ

17-06--krs2 (2)
Published on

ಕೆ.ಆರ್.ಸಾಗರ : ಬೆಳಗೊಳ ಗ್ರಾಮ ಸಮೀಪದ ಶ್ರೀ ಸ್ವಾಮಿನಾರಾಯಣ ಗುರುಕುಲ ಅಂತಾರಾಷ್ಟ್ರೀಯ ಶಾಲೆಯಲ್ಲಿ ಮಂಡ್ಯ ಮಿಮ್ಸ್ ಸಹಯೋಗದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ಮೈಸೂರಿನ ಪ್ಲಾಸ್ಟಿಕ್ ಸರ್ಜರಿ ತಜ್ಞ ಡಾ. ನಾರಾಯಣ ಹೆಗಡೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರತಿಯೊಬ್ಬರೂ
ನಿಗದಿತ ಅವಧಿಯಲ್ಲಿ ರಕ್ತದಾನ ಮಾಡಬಹುದು. ಇದರಿಂದ ದೇಹದ ಪ್ರಕ್ರಿಯೆಗಳು ಚುರುಕಾಗುತ್ತವೆ ಎಂದರು.
ಸಿನಿಮಾ ನಟ ಸುಚೇಂದ್ರ ಪ್ರಸಾದ್ ಅವರು ವೈದ್ಯಕೀಯ ರಂಗದ ಸಾಧನೆಗಳು ಮತ್ತು ಆರೋಗ್ಯ ಕ್ಷೇತ್ರದ ಸವಾಲುಗಳ ಕುರಿತು ಮಾತನಾಡಿದರು ನಂತರ ರಕ್ತದಾನ ಮಾಡಿದವರಿಗೆ ಹಣ್ಣು-ಹಂಪಲ ವಿತರಿಸಿದರು. ರಕ್ತದಾನಿಗಳಿಂದ 47 ಯೂನಿಟ್ ರಕ್ತ ಸಂಗ್ರಹಿಸಲಾಯಿತು. ಗುರುಕುಲ ಶಾಲೆಯ ಪ್ರಾಂಶುಪಾಲ ಹರ್ಷ ಜೋಶಿ, ಸಂಯೋಜಕ ಸತೀಶ್, ಶಾಲೆಯ ಶಿಕ್ಷಕರು. ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net