

ಮಡಿಕೇರಿ: ಬೆಂಗಳೂರು ನಗರ ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಅತಿಥಿ ಉಪನ್ಯಾಸಕಿ ಬೊಳ್ಳಮ್ಮ.ಪಿ.ಕೆ ಅವರು ಮಂಡಿಸಿದ ಮೊಬೈಲ್ ಆಧಾರಿತ ಸುದ್ದಿ ವಿತರಣೆಯ ಆರಂಭದೊಂದಿಗೆ ಸುದ್ದಿ ಬಳಕೆಯ ಸ್ಥಿತಿಗತಿ, ಕೊಡಗು ಜಿಲ್ಲೆಯಲ್ಲೊಂದು ಅಧ್ಯಯನ ಎಂಬ ಪ್ರೌಢಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯ ಪಿಎಚ್‌ಡಿ ನೀಡಿದೆ.
ಬೊಳ್ಳಮ್ಮ ಅವರಿಗೆ ವಿದ್ಯುನ್ಮಾನ ಮಾಧ್ಯಮ ವಿಭಾಗದ ಸಹ ಪ್ರಾಧ್ಯಾಪಕರಾದ, ಡಾ.ಟಿ.ಶ್ರೀಪತಿ ಅವರು ಮಾರ್ಗದರ್ಶನ ಮಾಡಿದರು.