ಫಾಸ್ಟ್‌ಫುಡ್ ಅಂಗಡಿಗೆ ಬೊಲೆರೋ ಡಿಕ್ಕಿ, ಬಿಸಿ ಪಾತ್ರೆ ಬಿದ್ದು ಕೆಲಸದಾಳು ಗಾಯ

Published on

ಸುಳ್ಯ: ಕುರುಂಜಿಭಾಗ್ ಕೆವಿಜಿ ಆಯುರ್ವೇದಿಕ್ ಆಸ್ಪತ್ರೆ ಬಳಿ ಇರುವ ಫಾಸ್ಟ್‌ಫುಡ್ ಅಂಗಡಿಗೆ ಶನಿವಾರ ರಾತ್ರಿ ಏಳು ಗಂಟೆ ಸುಮಾರಿಗೆ ಬೊಲೆರೋ ವಾಹನ ಡಿಕ್ಕಿ ಹೊಡೆದ ಪರಿಣಾಮ ಅಂಗಡಿ ಕಾರ್ಮಿಕ ಗಂಭೀರ ಗಾಯಗೊಂಡಿದ್ದಾರೆ.

ಅಂಗಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಗಾಂಧಿನಗರ ನಿವಾಸಿ ಪ್ರಸಾದ್ ಎಂಬುವರು ಅನ್ನ ಬೇಯಿಸುತ್ತಿದ್ದು, ಅವರ ಸ್ನೇಹಿತ ಹಾಗೂ ಗ್ರಾಹಕರೊಬ್ಬರು ಈ ಸಂದರ್ಭ ಅಂಗಡಿಯೊಳಗಿದ್ದರು. ವಾಹನ ಡಿಕ್ಕಿ ಹೊಡೆದ ರಭಸಕ್ಕೆ ಅನ್ನ ಬೇಯುತ್ತಿದ್ದ ಪಾತ್ರೆ ಪ್ರಸಾದ್ ಮೈಮೇಲೆ ಬಿದ್ದು ಮೈಯಲ್ಲಿ ಸುಟ್ಟ ಗಾಯವಾಗಿದೆ. ಚಾಲಕನ ಅತಿ ವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಘಟನೆಗೆ ಕಾರಣ ಎನ್ನಲಾಗಿದ್ದು, ಸುಳ್ಯ ಪೊಲೀಸರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net