ಬೋಳೆ ಶಾಲೆ ಅಮೃತ ಮಹೋತ್ಸವ 28ರಂದು

bole
Published on

ಅಂಕೋಲಾ: ಇಲ್ಲಿನ ಬೋಳೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವ ಏ. 28ರಂದು ಅಪರಾಹ್ನ 3 ಗಂಟೆಗೆ ಜರುಗಲಿದೆ ಎಂದು ಶಾಲೆಯ ಮುಖ್ಯಾಧ್ಯಾಪಕ ಜಗದೀಶ ಜಿ. ನಾಯಕ ಹೊಸ್ಕೇರಿ ಹೇಳಿದರು.

ಶಾಲೆಯ ಆವರಣದಲ್ಲಿ ಅಮೃತ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಸಮಾರಂಭ ಹಾಗೂ ಪರಮೇಶ್ವರಿ ಸಭಾಂಗಣವನ್ನು ಶಾಸಕ ಸತೀಶ ಕೆ. ಸೈಲ್ ಉದ್ಘಾಟಿಸುವರು. ವಂದಿಗೆ ಗ್ರಾಪಂ ಅಧ್ಯಕ್ಷ ಸತೀಶ ವಿ.ನಾಯಕ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ವಂದಿಗೆ ಗ್ರಾಪಂ ಸದಸ್ಯರಾದ ಪುಷ್ಪಲತಾ ಆರ್. ನಾಯಕ, ಕುಸುಮಾ ರವಿ ಆಗೇರ, ವಿಶ್ವೇಶ್ವರ ಗೌಡ, ಗೌರವಾನ್ವಿತ ಆಹ್ವಾನಿತರಾಗಿ ನಿವೃತ್ತ ಎಸಿಡಿಪಿಒ ವಿಮಲಾ ಸುಬ್ರಾಯ ನಾಯಕ, ತಾಪಂ ಮಾಜಿ ಅಧ್ಯಕ್ಷೆ ಸುಜಾತಾ ಗಾಂವಕರ, ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ವಿನಯ ಗಾಂವಕರ, ಉಪನ್ಯಾಸಕ ವಿಜಯ ವಿ.ನಾಯಕ ಬೊಳೆ, ಕಾರವಾರ ಲೋಕೋಪಯೋಗಿ ಇಲಾಖೆಯ ಎಇಇ ರಾಮು ಬಿ.ಅರ್ಗೇಕರ, ಕುಮಟಾ ಡಯಟ್ ಉಪನಿರ್ದೇಶಕ ಶಿವರಾಮ ಎಂ., ತಾಪಂ.ಇಒ ಸುನೀಲ ಎಂ, ಬಿಇಒ ಮಂಗಳಲಕ್ಷ್ಮೀ ಪಾಟೀಲ, ದೈಹಿಕ ಶಿಕ್ಷಣ ಪರಿವೀಕ್ಷಕರಾದ ಮಂಜುನಾಥ ಮಾಣಿ ನಾಯಕ ಆಗಮಿಸಲಿದ್ದಾರೆ.

ಸ್ಮರಣ ಸಂಚಿಕೆ ’ಗುಡಿಮನೆ’, ಮಕ್ಕಳ ಕೈಬರಹಗಳ ಸಂಗ್ರಹ ’ಅಮೃತ’ ಬಿಡುಗಡೆ, ಗುರು ವಂದನೆ ಹಾಗೂ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಮೃತ ಮಹೋತ್ಸವದ ಸವಿನೆನಪಿಗಾಗಿ ಸಭಾ ಕಾರ್ಯಕ್ರಮದ ನಂತರ ’ಸಾರ್ವಜನಿಕ ಅನ್ನಸಂತರ್ಪಣೆ’ ಹಮ್ಮಿಕೊಳ್ಳ ಲಾಗಿದೆ. ಬೊಳೆ ಹಾಗೂ ಬೊಮ್ಮಿಗುಡಿ ಗೆಳೆಯರ ಬಳಗದಿಂದ ’ಶ್ರೀಕೃಷ್ಣ ವಿವಾಹ’ ಯಕ್ಷಗಾನ ಪ್ರದ ರ್ಶನಗೊಳ್ಳಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net