ಬೆಂಗಳೂರು: ನಾಗರಬಾವಿ ವೃತ್ತದ ಬಳಿಯ ನಮ್ಮೂರ ತಿಂಡಿ ಹೋಟೆಲ್ನ ಅಡುಗೆ ಕೋಣೆಯಲ್ಲಿ ಶನಿವಾರ ಬಿಸಿ ನೀರಿನ ಬಾಯ್ಲರ್‌ನ ಪೈಪ್ ಸ್ಫೋಟಗೊಂಡು ಇಬ್ಬರು ಕಾರ್ಮಿಕರು ಸೇರಿ ಮೂವರು ಗಾಯಗೊಂಡಿದ್ದಾರೆ.
ಐಶ್ವರ್ಯ(೧೯), ರವಿಕುಮಾರ್(೨೦) ಕಾರ್ತಿಕ್(೧೪) ಗಾಯಗೊಂಡವರು.
ಬಿಸಿ ನೀರಿನ ಬಾಯ್ಲರ್‌ನಿಂದ ಇಡ್ಲಿ ತಯಾರಿಸುವ ಪೆಟ್ಟಿಗೆಗೆ ಪೈಪ್ ಮೂಲಕ ಸ್ಟೀಮ್ ಹೋಗುವಂತೆ ವ್ಯವಸ್ಥೆ ಮಾಡಲಾಗಿತ್ತು. ಸ್ಟೀಮ್ನ ತೀವ್ರತೆ ಹೆಚ್ಚಿ ಪೈಪ್ ಸ್ಫೋಟಗೊಂಡಿದೆ. ಆಗ ಸಮೀಪದಲ್ಲೇ ಕೆಲಸ ಮಾಡುತ್ತಿದ್ದ ಇಬ್ಬರು ಕಾರ್ಮಿಕರು ಮತ್ತೊಬ್ಬ ಅಪ್ರಾಪ್ತನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಆ ಮೂವರಿಗೂ ಚಿಕಿತ್ಸೆ ಕೊಡಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಹೋಟೆಲ್‌ನಲ್ಲಿ ಅಪ್ರಾಪ್ತ ಕಾರ್ತಿಕ್ ಕೆಲಸ ಮಾಡುತ್ತಿದ್ದ ಎಂಬ ಶಂಕೆ ವ್ಯಕ್ತವಾಗಿದೆ. ಆದರೆ ಇದೇ ಹೋಟೆಲ್‌ನಲ್ಲಿ ಕವನ ಎಂಬಾಕೆ ಕೆಲಸ ಮಾಡುತ್ತಿದ್ದು ಆಕೆಯನ್ನು ಭೇಟಿ ಮಾಡಲು ಬಂದಿದ್ದ ಕಾರ್ತಿಕ್ ಘಟನೆಯ ವೇಳೆ ಗಾಯಗೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜ್ಞಾನಭಾರತಿ ಠಾಣೆಯಲ್ಲಿ ದೂರು ದಾಖಲಾಗಿದೆ.