ಬಿಒಐ ಇನ್ಸುರನ್ಸ್​ ಚೆಕ್​ ವಿತರಣೆ

IMG-20241219-WA0027-1.jpg
Published on

ಹುಬ್ಬಳ್ಳಿ: ಬ್ಯಾಂಕ್ ಆಫ್ ಇಂಡಿಯಾ (ಬಿಒಐ) ಸ್ಯಾಲರಿ ಅಕೌಂಟ್ ಇರುವವರಿಗೆ ನೀಡುವ ಎಕ್ಸಿಡೆಂಟಲ್ ಇನ್ಸುರನ್ಸ್ 30 ಲಕ್ಷ ರೂ. ಪರಿಹಾರ ಚೆಕ್ ಅನ್ನು ಖಾತೆದಾರರ ಕುಟುಂಬದವರಿಗೆ ಹಸ್ತಾಂತರ ಮಾಡಲಾಯಿತು.

ಸ್ಯಾಲರಿ ಅಕೌಂಟ್ ಇರುವ ನೌಕರರಿಗೆ ಬ್ಯಾಂಕ್ ಆಫ್ ಇಂಡಿಯಾ ಉಚಿತ ಎಕ್ಸಿಡೆಂಟಲ್ ಇನ್ಸುರನ್ಸ್ ಸೌಲಭ್ಯ ನೀಡುತ್ತಿದೆ.

ಕಿಲೋರ್ಸ್ಕರ್ ಇಲೆಕ್ಟ್ರಿಕ್ ಕಂಪನಿಯ ನೌಕರ ವಿಲಿಯಂ ಜೋನಸ್ ಅವರು ಬಿಒಐ ಗೋಕುಲ ರೋಡ್ ಶಾಖೆಯಲ್ಲಿ ಸ್ಯಾಲರಿ ಅಕೌಂಟ್ ಹೊಂದಿದ್ದು, ಇವರು ಇತ್ತೀಚೆಗೆ ಅಪಘಾತದಲ್ಲಿ ಮರಣ ಹೊಂದಿದ್ದಾರೆ.
ಅವರು ನಾಮ ನಿರ್ದೇಶನ ಮಾಡಿದ್ದ ಅವರ ಪತ್ನಿ ರಾಜಮಣಿ ವಿಲಿಯಂ ಅವರಿಗೆ 30 ಲಕ್ಷ ರೂ. ಚೆಕ್ ಅನ್ನು ಬಿಒಐ ವಲಯ ವ್ಯವಸ್ಥಾಪಕ ವಿ.ವಿ. ಕೃಷ್ಣ ಕಿಶೋರ ಅವರು ಕಿಲೋರ್ಸ್ಕರ್ ಕಂಪನಿಯಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ವಿತರಣೆ ಮಾಡಿದರು. ಕಂಪನಿ ಯುನಿಟ್ ಹೆಡ್ ಬಿ. ಬಸವರಾಜ ಇದ್ದರು.

ಬ್ಯಾಂಕ್ ವ್ಯವಸ್ಥಾಪಕ ರಂಗ ರೆಡ್ಡಿ, ಎನ್. ಪಾಪರಾವ್, ಬ್ಯಾಂಕ್ ಹಾಗೂ ಕಂಪನಿ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net