ಹೇರೂರು ಬಳಿ ಕಾಟಿ ಸಾವು

12 SKP Kati
Published on

ಸಕಲೇಶಪುರ. ತಾಲೂಕಿನ ಯಸಳೂರು ವಲಯ ಅರಣ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ಕಾಟಿಯೊಂದು ಮೃತಪಟ್ಟಿದೆ. ಯಸಳೂರು ಅರಣ್ಯ ಇಲಾಖೆ ವ್ಯಾಪ್ತಿಯ ಹೇರೂರು ಗ್ರಾಮದ ಹೊರವಲಯದ ಅರಣ್ಯದಂಚಿನಲ್ಲಿ ಕಾಟಿ
ಅನಾರೋಗ್ಯದಿಂದ ನರಳುತ್ತಿತ್ತು. ಕಳೆದ ಒಂದು ವಾರದಿಂದ ಮೇವು ತ್ಯಜಿಸಿದ ಕಾಟಿ ನಿಂತಲ್ಲೇ ನಿಂತಿರುವುದನ್ನು ಗಮನಿಸಿದ ಗ್ರಾಮಸ್ಥರು ಅರಣ್ಯ ಇಲಾಖೆಗೆ ಸಾಕಷ್ಟು ಬಾರಿ ದೂರವಾಣಿ ಕರೆ ಮಾಡಿ ವನ್ಯಜೀವಿಗೆ ಚಿಕಿತ್ಸೆ ಕೊಡಿಸುವಂತೆ ಮನವಿ ಮಾಡಿದ್ದರು.
ಆದರೆ ಗ್ರಾಮಸ್ಥರ ಮನವಿಗೆ ಕವಡೆಕಾಸಿನ ಕಿಮ್ಮತ್ತು ನೀಡದ ಅರಣ್ಯ ಇಲಾಖೆ ಸಿಬ್ಬಂದಿ ಕಾಟಿ ಅನಾರೋಗ್ಯಕ್ಕಿಡಾಗಿರುವ ಪ್ರದೇಶಕ್ಕೆ ಭೇಟಿ ನೀಡುವ ಸೌಜನ್ಯವನ್ನೂ ತೋರಲಿಲ್ಲ. ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಅಧಿಕಾರಿಗಳಿಂದ ಯಾವುದೆ ಚಿಕಿತ್ಸೆ ದೊರೆಯದ
ಕಾರಣ ಬುಧವಾರ ಕಾಟಿ ಕೊನೆಯುಸಿರೆಳೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net