ದೇಹದಾನ ಮಾಡಿ ಸಾರ್ಥಕತೆ ಮೆರೆದ ಮೂವರು ವೃದ್ಧೆಯರು

0101
Published on

ಚಿಕ್ಕೋಡಿ: ಪಟ್ಟಣದ ಹರಿ ನಗರದಲ್ಲಿರುವ ಮೂವರು ವೃದ್ಧೆಯರು ಸಾವಿನ ನಂತರ ತಮ್ಮ ದೇಹವನ್ನು ಬೆಳಗಾವಿಯ ಜವಾಹರಲಾಲ್ ನೆಹರು ಮೆಡಿಕಲ್ ಕಾಲೇಜಿಗೆ ದಾನ ಮಾಡಲು ಬಯಸಿದ್ದು, ಇತ್ತೀಚೆಗೆ ಸ್ವ ಇಚ್ಛೆಯಿಂದ ಒಪ್ಪಿಗೆ ಪತ್ರ ಬರೆದುಕೊಟ್ಟು ಸಾರ್ಥಕತೆ ಮೆರೆದಿದ್ದಾರೆ.

ಪಟ್ಟಣದ ಹರಿ ನಗರದ ನಿವಾಸಿಗಳಾದ ಮಹಾದೇವಿ ಅಪ್ಪಣ್ಣ ದಂಡಿನವರ (68), ಶಾಂತಾ ಅಪ್ಪಣ್ಣ ದಂಡಿನವರ (74) ಹಾಗೂ ಪಕ್ಕದ ಮನೆಯ ಬಸವ್ವ ಮಡಿವಾಳಯ್ಯ ಕಾಂತಿಮಠ (70) ಅವರು ತಮ್ಮ ಸಾವಿನ ಬಳಿಕ ವೈದ್ಯಕೀಯ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ದೇಹದಾನ ಮಾಡಿರುವುದಾಗಿ ತಿಳಿಸಿದ್ದಾರೆ.

ಜನರು ತಪ್ಪು ತಿಳಿವಳಿಕೆ ಬಿಟ್ಟು ದೇಹ ಮತ್ತು ಅಂಗಾಂಗ ದಾನಕ್ಕೆ ಮುಂದಾಗಬೇಕು ಎಂದು ವೈದ್ಯ ಡಾ.ದಯಾನಂದ ನೂಲಿ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net