

ಬೆಂಗಳೂರು: ನಗರದ ಎಲ್ಲ ಅಪಾರ್ಟ್ವೆುಂಟ್ಗಳಲ್ಲಿ ಕಡ್ಡಾಯವಾಗಿ ಥರ್ಮಲ್ ಸ್ಕ್ರೀನಿಂಗ್ ಮಾಡುವ ಮೂಲಕ ಕರೊನಾ ಸೋಂಕು ಹರಡುವಿಕೆ ನಿಯಂತ್ರಿಸಲು ಸಹಕರಿಸಬೇಕು ಎಂದು ಬಿಬಿಎಂಪಿ ಆದೇಶ ಹೊರಡಿಸಿದೆ.
ನಗರದ ಅಪಾರ್ಟ್ವೆುಂಟ್ಗಳು, ಲೇಔಟ್ಗಳು ಹಾಗೂ ವಠಾರಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮುಖ್ಯವಾಗಿದೆ. ಅಪಾರ್ಟ್ವೆುಂಟ್ ಪ್ರವೇಶಿಸುವವರಿಗೆ ಕಡ್ಡಾಯವಾಗಿ ದೇಹದ ಉಷ್ಣಾಂಶ ತಪಾಸಣೆ ಮಾಡಬೇಕು. ಕೈಗಳ ಸ್ವಚ್ಛತೆಗೆ ಸೋಪ್ ಅಥವಾ ನೈರ್ಮಲ್ಯಕ ಒದಗಿಸಬೇಕು. ಅಪಾರ್ಟ್
ಮೆಂಟ್, ಲೇಔಟ್ಗಳಲ್ಲಿ ನಿಯಮಿತವಾಗಿ ಸೋಂಕು ನಿವಾರಕ ದ್ರಾವಣ ಸಿಂಪಡಿಸಬೇಕು. ಕೆಮ್ಮು, ಶೀತ, ಜ್ವರವಿದ್ದರೆ ಕೂಡಲೇ ಚಿಕಿತ್ಸೆಗೆ ಒಳಪಡಿಸಬೇಕು ಎಂದು ಪಾಲಿಕೆ ಆಯುಕ್ತ ಬಿ.ಎಚ್. ಅನಿಲ್ಕುಮಾರ್ ಸುತ್ತೋಲೆ ಹೊರಡಿಸಿದ್ದಾರೆ.
ಪೌರಕಾರ್ವಿುಕರು ಮಾಸ್ಕ್ ಧರಿಸಿ: ಅಪಾರ್ಟ್ವೆುಂಟ್ ಹಾಗೂ ಅದರ ಸುತ್ತಲೂ ಸ್ವಚ್ಛತಾ ಕಾರ್ಯ ಮಾಡುವ ಪೌರಕಾರ್ವಿುಕರು ಕಡ್ಡಾಯವಾಗಿ ಮುಖಕ್ಕೆ ಮಾಸ್ಕ್, ಕೈಗಳಿಗೆ ಗವಸು, ಬೂಟು ಧರಿಸಿ ತ್ಯಾಜ್ಯ ಸಂಗ್ರಹಿಸಬೇಕು. ಅಪಾರ್ಟ್ವೆುಂಟ್ ನಿವಾಸಿಗಳು ಮೆಡಿಕಲ್ ತ್ಯಾಜ್ಯವನ್ನು ಪ್ರತ್ಯೇಕವಾಗಿ ಪೇಪರ್ನಲ್ಲಿ ಸಂಗ್ರಹಿಸಿ ನೀಡಬೇಕು. ಪಾಲಿಕೆಯ ಮುಂದಿನ ಆದೇಶದ ನೀಡುವವರೆಗೆ
ಅಪಾರ್ಟ್ವೆುಂಟ್ಗಳ ಈಜುಕೊಳ, ಗರಡಿಮನೆ, ಉದ್ಯಾನ ಮತ್ತು ಆಟದ ಪ್ರದೇಶಗಳನ್ನು ಬಳಸದಂತೆ ಆಯುಕ್ತರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.