

ಕೆ.ಆರ್.ನಗರ: ಪಟ್ಟಣದ ಪ್ರವಾಸಿ ಮಂದಿರದ ನೀರಿನ ಟ್ಯಾಂಕ್ ಬಳಿ ಕೊಳೆತ ಸ್ಥಿತಿಯಲ್ಲಿದ್ದ ಅಪರಿಚಿತ ಪುರುಷನ ಶವ ದೊರೆತಿದ್ದು, ಈ ಬಗ್ಗೆ ಪ್ರವಾಸಿ ಮಂದಿರದ ದಿನಗೂಲಿ ನೌಕರ ಆರ್.ಮಧು ನೀಡಿದ ದೂರಿನ ಮೇರೆಗೆ ಪಟ್ಟಣದ ಪೊಲೀಸರು ಸ್ಥಳಕ್ಕೆ ತೆರಳಿ ಶವವನ್ನು ಸ್ಥಳದಿಂದ ತೆಗೆದು ಮೈಸೂರಿನ ಆಸ್ಪತ್ರೆಯೆ ಶವಾಗಾರಕ್ಕೆ ಸಾಗಿಸಿದ್ದಾರೆ.
ಸುಮಾರು 32 ರಿಂದ 35 ವರ್ಷದ ಪುರುಷನಾಗಿದ್ದು, ಶವವು ಕೊಳೆತು ಗುರುತಿಸಲಾಗದ ಸ್ಥಿತಿಯಲ್ಲಿದೆ. ತೆಳು ಪಿಂಕ್ ಬಣ್ಣದ ಶರ್ಟ್, ಸಿಮೆಂಟ್ ಕಲರ್‌ಜೀನ್ಸ್ ಪ್ಯಾಂಟ್ ಮತ್ತು ನೇರಳೆ ಬಣ್ಣದ ಅಂಡರ್‌ವೇರ್ ಧರಿಸಿದ್ದು, ಸುಮಾರು 5.5 ಅಡಿ ಎತ್ತರದ ಈತನ ಬಗ್ಗೆ ಮಾಹಿತಿ ದೊರೆತಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಕೆ.ಆರ್.ನಗರ ಪೊಲೀಸ್ ಠಾಣೆ ಸಂಪರ್ಕಿಸುವಂತೆ ಅಥವಾ ದೂ.0821-25200040, 08223-263666 ಸಂಪರ್ಕಿಸುವಂತೆ ಕೆ.ಆರ್.ನಗರ ಪೋಲೀಸರು ಕೋರಿದ್ದಾರೆ.