ರೈಲ್ವೆ ಹಳಿ ಮೇಲೆ ಅಪರಿಚಿತನ ಶವ, ಆತ್ಮಹತ್ಯೆ ಶಂಕೆ

shimogga railway
ಸಂಗ್ರಹ ಚಿತ್ರ
Published on

ಶಿವಮೊಗ್ಗ: ಶಿವಮೊಗ್ಗ-ಭದ್ರಾವತಿ ನಡುವೆ ರೈಲ್ವೆ ಹಳಿ ಮೇಲೆ ಶನಿವಾರ ಅಪರಿಚಿತನ ಶವ ಪತ್ತೆಯಾಗಿದೆ. 68 ವರ್ಷದ ವ್ಯಕ್ತಿ ಮೃತಪಟ್ಟಿದ್ದು ಚಲಿಸುವ ರೈಲಿಗೆ ಅಡ್ಡ ಬಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಭದ್ರಾವತಿಯ ಆಹಾರ ನಿಗಮದ ಬಳಿ ರೈಲ್ವೆ ಹಳಿ ಮೇಲೆ ಮೃತದೇಹ ಬಿದ್ದಿರುವುದನ್ನು ಗಮನಿಸಿದ ಕೀ ಮ್ಯಾನ್ ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಶಿವಮೊಗ್ಗ ರೈಲ್ವೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶುಕ್ರವಾರ ಭದ್ರಾವತಿಯ ಮೊಸರಹಳ್ಳಿ ಬಳಿ 50 ವರ್ಷದ ಅಪರಿಚಿತನ ಮೃತದೇಹ ರೈಲ್ವೆ ಹಳಿ ಮೇಲೆ ಪತ್ತೆಯಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net