ಹೇಮಾವತಿ ನದಿಯಲ್ಲಿ ಅಪರಿಚಿತನ ಶವ ಪತ್ತೆ

Published on

ಹೊಳೆನರಸೀಪುರ: ಪಟ್ಟಣದ ಹೇಮಾವತಿ ನದಿಯಲ್ಲಿ 55 ದಿಂದ 60 ವರ್ಷ ವಯೋಮಾನದ ಅಪರಿಚಿತ ವ್ಯಕ್ತಿಯ ಮೃತದೇಹ ಗುರುವಾರ ಪತ್ತೆಯಾಗಿದೆ.

ಮೃತ ವ್ಯಕ್ತಿಯ ಕೊರಳಲ್ಲಿ ಕಂಬಳಿ ದಾರದಿಂದ ಕಟ್ಟಿದ ತಾಯತವಿದೆ. ಹಣೆ ಮೇಲ್ಭಾಗದಲ್ಲಿ ಕೂದಲು ಉದುರಿವೆ. ಮೃತ ವ್ಯಕ್ತಿಯ ವಾರಸುದಾರರು ಇದ್ದಲ್ಲಿ ಹತ್ತಿರದ ಪೊಲೀಸ್ ಠಾಣೆ ಅಥವಾ ನಗರ ಪೊಲೀಸ್ ಠಾಣೆ ದೂ. ಸಂಖ್ಯೆ 0817-5273333 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net