ಮೂರು ದಿನಗಳ ಬಳಿಕ ಮೃತದೇಹ ಪತ್ತೆ

1001496265
Published on

ಹೊಳೆನರಸೀಪುರ: ಮೂರು ದಿನಗಳ ಹಿಂದೆ ಹೇಮಾವತಿ ನಾಲೆಯಲ್ಲಿ ಕೊಚ್ಚಿಹೋಗಿದ್ದ ತಾಲೂಕಿನ ಸಿಗರನಹಳ್ಳಿ ಗ್ರಾಮದ ಕುಮಾರ್(60) ಅವರ ಮೃತದೇಹ ಬುಧವಾರ ದೊಡ್ಡಕುಂಚೆ ಸಮೀಪದ ಕೆರೆಯಲ್ಲಿ ಪತ್ತೆಯಾಗಿದೆ.

ತಾಲೂಕಿನ ಹರಿಹರಪುರ ಕೊಪ್ಪಲು ಸಮೀಪವಿರುವ ಹೇಮಾವತಿ ನಾಲೆಯಲ್ಲಿ ಸೋಮವಾರ ಕುಮಾರ್ ಕಾಲುಜಾರಿಬಿದ್ದು ಕೊಚ್ಚಿಹೋಗಿದ್ದರು. ಮಂಗಳವಾರ ಅಗ್ನಿ ಶಾಮಕ ಸಿಬ್ಬಂದಿ ದೊಡ್ಡಕುಂಚೇವು ಸಮೀಪದ ಕೆರೆಯಲ್ಲಿ ಹುಡುಕಿದರೂ ಮೃತದೇಹ ಸಿಕ್ಕಿರಲಿಲ್ಲ. ನಾಲೆಯಲ್ಲಿ ಭಾರಿ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದರಿಂದ ಶವ ಹುಡುಕಾಟ ಕಷ್ಟವಾಗಿತ್ತು. ಆದರೆ ಬುಧವಾರ ಬೆಳಗ್ಗೆ ಕೆರೆಯಲ್ಲಿ ಮೃತದೇಹ ತೆಲುತ್ತಿದ್ದನ್ನು ಕಂಡು ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದರು.

ಆಗ್ನಿಶಾಮಕ ದಳದ ಉಮಾ ಮಹೇಶ್, ರೇವಣ್ಣ, ರಂಗಸ್ವಾಮಿ ಹಾಗೂ ರೋಹಿತ್ ಕೆರೆಯಿಂದ ಮೃತದೇಹ ಹೊರ ತೆಗೆಯಲು ಶ್ರಮಿಸಿದರು. ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net