ಕುಮಟಾ: ತಾಲೂಕಿನ ಅಳ್ವೇಕೋಡಿಯಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ಲಕ್ಷ್ಮಣ ನಾರಾಯಣ ಗಾವಡಿ (38) ಮೃತದೇಹ ಮನೆಯ ಹಿಂಬದಿಯ ಬಾವಿಯಲ್ಲಿ ಪತ್ತೆಯಾಗಿದೆ.
ವಿಪರೀತ ಸಾರಾಯಿ ಕುಡಿಯುವ ಚಟ ಹೊಂದಿದ್ದ ಲಕ್ಷ್ಮಣ ಗವಡಿ, ಕಳೆದ ಒಂದು ವಾರದಿಂದ ಸಾರಾಯಿ ಕುಡಿಯುವುದು ಬಿಟ್ಟಿದ್ದ. ಇದರಿಂದ ಮಾನಸಿಕವಾಗಿ ಕುಗ್ಗಿದ್ದರು ಎಂದು ಮೃತನ ಅಣ್ಣ ತುಳಸಿದಾಸ ನಾರಾಯಣ ಗಾವಡಿ ದೂರಿನಲ್ಲಿ ತಿಳಿಸಿದ್ದಾರೆ. ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.