ಹಾಡ್ಲಿ ಗ್ರಾಮದಲ್ಲಿ ಶವ ಪತ್ತೆ

Oplus_131072
ಮಂಡ್ಯ ಜಿಲ್ಲಾ ಎಸ್ ಪಿ ಮಲ್ಲಿಕಾರ್ಜುನ ಬಾಲ ದಂಡಿ, ಎ.ಎಸ್.ಪಿ. ಸಿ.ಈ.ತಿಮ್ಮಯ್ಯ, ಸ್ಥಳಕ್ಕೆ ಬೇಟಿನೀಡಿರುವುದು.
Published on

ಹಲಗೂರು: ಹಾಡ್ಲಿ ಗ್ರಾಮದಲ್ಲಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿ ಶವವನ್ನು ಅರೆಬರೆ ಸುಟ್ಟು ಹಾಕಲಾಗಿದೆ. ಗ್ರಾಮದ ನೀಲಿಗಿರಿ ಜಮೀನಿನ ಸಮೀಪ ಕುರಿ ಮೇಯಿಸುತ್ತಿದ್ದಾಗ ದುರ್ವಾಸನೆ ಗಮನಿಸಿ ನೋಡಿದಾಗ ಮೃತದೇಹ ಇರುವುದು ಸೋಮವಾರ ಪತ್ತೆಯಾಗಿದೆ.

ಹಾಡ್ಲಿ ಗ್ರಾಮದ ಪ್ರಕಾಶ್ ಅವರು ಹಲಗೂರು ಸರ್ಕಲ್ ಇನ್ಸ್‌ಪೆಕ್ಟರ್ ಅವರಿಗೆ ಕರೆ ಮಾಡಿ ತಿಳಿಸಿದ್ದಾರೆ. ಹಲಗೂರು ಸರ್ಕಲ್ ಇನ್ ಸ್ಪೆಕ್ಟರ್ ಶ್ರೀಧರ್, ಪಿಎಸ್‌ಐ ಲೋಕೇಶ್ ಸ್ಥಳಕ್ಕೆ ಭೇಟಿ ನೀಡಿ, ಶ್ವಾನದಳ ಕರೆಸಿ ಪರಿಶೀಲಿಸಿದರು. ಮಂಡ್ಯ ಎಸ್‌ಪಿ ಮಲ್ಲಿಕಾರ್ಜುನ ಬಾಲ ದಂಡಿ, ಎ.ಎಸ್.ಪಿ. ಸಿ.ಈ.ತಿಮ್ಮಯ್ಯ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ಅಪರಾಧಿಗಳ ಪತ್ತೆಗೆ ಸೂಚನೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net