

ಬಾಗಲಕೋಟೆ: ವಯೋಸಹಜ ಕಾಯಿಲೆಯಿಂದ ಕುಮಾರೇಶ್ವರ ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾದ ನಿವೃತ್ತ ಶಿಕ್ಷಕ ಶಿವಪುತ್ರಪ್ಪ ಬಸಪ್ಪ ಅಂಗಡಿ(80) ಅವರ ಪಾರ್ಥಿವ ಶರೀರವನ್ನು ಬಿವಿವಿ ಸಂಘದ ಎಸ್.ಎನ್. ಮೆಡಿಕಲ್ ಕಾಲೇಜ್ಗೆ ದಾನ ಮಾಡಲಾಯಿತು.
ಮೂಲತಃ ಗದಗ ಜಿಲ್ಲೆ ರೋಣ ತಾಲೂಕಿನ ಹುನಗುಂಡಿ ಗ್ರಾಮದ ಶಿವಪುತ್ರಪ್ಪ ಅವರು, ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ತಮ್ಮ ಮರಣಾನಂತರ ದೇಹದಾನ ಮಾಡುವಂತೆ ಕುಟುಂಬಸ್ಥರಿಗೆ ತಿಳಿಸಿದ್ದರು. ಮಂಗಳವಾರ ಮಧ್ಯಾಹ್ನ ಕುಮಾರೇಶ್ವರ ಆಸ್ಪತ್ರೆಯಲ್ಲಿ ನಿಧನರಾದ ಅವರ ಪಾರ್ಥಿವ ಶರೀರವನ್ನು ಗ್ರಾಮಕ್ಕೆ ತೆಗೆದುಕೊಂಡು ಹೋಗಲಾಯಿತು. ಬಂಧು, ಬಳಗದವರು ದರ್ಶನ ಪಡೆದ ಬಳಿಕ ಸಂಜೆ ವಾಪಸ್ ಬಾಗಲಕೋಟೆಗೆ ಆಗಮಿಸಿ ಮೆಡಿಕಲ್ ಕಾಲೇಜ್ಗೆ ಪಾರ್ಥಿವ ಶರೀರವನ್ನು ಕುಟುಂಬಸ್ಥರು ಹಸ್ತಾಂತರಿಸಿದರು.
ಮೃತರಿಗೆ ಪತ್ನಿ, ಓರ್ವ ಪುತ್ರ, ನಾಲ್ವರು ಪುತ್ರಿಯರು ಇದ್ದಾರೆ.