ಬಾಬ್ ಮಾರ್ಲಿ ಫ್ರಂ ಕೋಡಿಹಳ್ಳಿ ನಾಟಕ ಪ್ರದರ್ಶನ

HBDNN17-7-201418-33-5518HBHBDNKVSJPG
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ 135ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಜು. 26ರಂದು ಸಂಜೆ 5.30ಕ್ಕೆ ಬಾಬ್ ಮಾರ್ಲಿ ಫ್ರಂ ಕೋಡಿಹಳ್ಳಿ' ನಾಟಕ ಪ್ರದರ್ಶನ, ಸುಗಮ ಸಂಗೀತ, ಶಿಕ್ಷಣ ಸಂಸ್ಥೆ ಸ್ಮರಣೆ, ಹಿರಿಯ ಸದಸ್ಯರಿಗೆ ಗೌರವ ಸಮರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಂಘದ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಆಯೋಜಿಸಲಾಗಿದೆ. ಅತಿಥಿಯಾಗಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಽಕಾರದ ಸದಸ್ಯ ಅಶೋಕ ಚಂದರಗಿ ಪಾಲ್ಗೊಳ್ಳುವರು. ಸಂಘದ ಸಹ ಕಾರ್ಯದರ್ಶಿ ಬಸವಪ್ರಭು ಹೊಸಕೇರಿ ಅಧ್ಯಕ್ಷತೆ ವಹಿಸುವರು. ಸಂಘದ ಹಿರಿಯ ಸದಸ್ಯರಾದ ಧಾರವಾಡದ ಪ್ರೊ. ಎನ್.ಸಿ. ಹೆಗಡಿ ಮತ್ತು ರಾಜೇಂದ್ರ ಸಾವಳಗಿ ಅವರನ್ನು ಡಾ. ಪಾರ್ವತಿ ಹಾಲಭಾವಿ ಗೌರವಿಸುವರು. ಶಿಕ್ಷಣ ಸಂಸ್ಥೆ ಸ್ಮರಣೆಯಲ್ಲಿಡಾ. ಬಿ.ಆರ್. ಅಂಬೇಡ್ಕರ್ ಶಿಕ್ಷಣ ಸಂಸ್ಥೆ ಮತ್ತು ಚಾರಿಟೇಬಲ್ ಟ್ರಸ್ಟ್' ಕುರಿತು ಟ್ರಸ್ಟ್ನ ಕಾರ್ಯದರ್ಶಿ ಎಫ್.ಎಚ್. ಜಕ್ಕಪ್ಪನವರ ಸ್ಮರಿಸುವರು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net