ದಡ ಬಿಟ್ಟು ರಸ್ತೆಗೆ ಬಂದ ಬೋಟ್​ಗಳು!

21bkl3 (3)
Published on

ಭಟ್ಕಳ: ತಾಲೂಕಿನ ಕರಾವಳಿಯ ಬಹುತೇಕ ಕಡೆಗಳಲ್ಲಿ ಕಡಲ ತೀರಗಳು ಕೊಚ್ಚಿ ಹೋಗಿದ್ದು. ಮೀನುಗಾರರಿಗೆ ತಮ್ಮ ದೋಣಿಗಳನ್ನು ಇಡಲು ಸ್ಥಳವಿಲ್ಲದಂತಾಗಿದೆ. ಮುರ್ಡೆಶ್ವರದಲ್ಲೂ ಇದೇ ಪರಿಸ್ಥಿತಿ ಎದುರಾಗಿದ್ದು, ಸುಮಾರು 100ಕ್ಕೂ ಅಧಿಕ ಯಾಂತ್ರೀಕೃತ ಹಾಗೂ ನಾಡದೋಣಿಗಳನ್ನು ರಸ್ತೆಯಲ್ಲಿ ತಂದು ನಿಲ್ಲಿಸಲಾಗಿದೆ.
ತಾಲೂಕು ಆಡಳಿತ ಸತತ 3-4 ದಿನಗಳ ಎಚ್ಚರಿಕೆ ನೀಡಿದ್ದ ಹಿನ್ನೆಲೆಯಲ್ಲಿ ಮೀನುಗಾರರು ತಮ್ಮ ದೋಣಿಗಳನ್ನು ದಡದಿಂದ ಮುರ್ಡೆಶ್ವರ ದೇವಸ್ಥಾನಕ್ಕೆ ತೆರಳುವ ರಸ್ತೆ ಬದಿಗಳಲ್ಲಿ ತಂದಿಟ್ಟಿದ್ದಾರೆ. ಇನ್ನು ಕೆಲವರು ಮನೆಯ ಅಂಗಳದಲ್ಲಿ ಇಟ್ಟುಕೊಂಡಿದ್ದಾರೆ. ಲಾಕ್​ಡೌನ್ ಇದ್ದ ಹಿನ್ನ್ನೆಲೆಯಲ್ಲಿ ರಸ್ತೆಯಲ್ಲಿ ದೋಣಿಗಳನ್ನು ಇಟ್ಟರೂ ಯಾರದ್ದೂ ಆಕ್ಷೇಪ ಎದುರಾಗಿಲ್ಲ. ಅಂಗಡಿ ಮುಂಗಟ್ಟುಗಳು ಬಂದ್ ಇರುವುದರಿಂದ ಮೀನುಗಾರರಿಗೆ ತಾತ್ಕಾಲಿಕವಾಗಿ ರಿಲೀಫ್ ಸಿಕ್ಕಿದೆ. ಇಲ್ಲವಾದರೆ ಸಂಚಾರ ಸಮಸ್ಯೆ ಎದುರಾಗುತ್ತಿತ್ತು. ಮುರ್ಡೆಶ್ವರ ಕಡಲತೀರವೊಂದರಲ್ಲಿಯೇ ಸಾವಿರಾರು ದೋಣಿಗಳು ಇದ್ದು, ಅದನ್ನು ಸುರಕ್ಷಿತವಾಗಿ ಇಡಲು ಅವಕಾಶ ಕಲ್ಪಿಸಬೇಕು ಎಂದು ಮೀನುಗಾರರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net