ಶ್ರೀನಿವಾಸಸಾಗರದಲ್ಲಿ ಬೋಟಿಂಗ್ ವಿಹಾರಕ್ಕೆ ಚಾಲನೆ

IMG_20250925_225905.jpg
Published on

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ತಾಲೂಕಿನ ಪುರಾಣ ಪ್ರಸಿದ್ಧ ಲಕ್ಷ್ಮೀ ವೆಂಕಟೇಶ್ವರಸ್ವಾಮಿ ನೆಲೆಸಿರುವ ಶ್ರೀನಿವಾಸ ಸಾಗರದಲ್ಲಿ ನೂತನವಾಗಿ ಪ್ರಾರಂಭಿಸಿರುವ ದೋಣಿ ವಿಹಾರಕ್ಕೆ ಆದಿಚುಂಚನಗಿರಿ ಶಾಖಾ ಮಠದ ಮಂಗಳನಾಥಸ್ವಾಮೀಜಿ ಚಾಲನೆ ನೀಡಿದರು.
ಸ್ವತಃ ದೋಣಿ ವಿಹಾರದಲ್ಲಿ ಸಾಗುವ ಮೂಲಕ ಸಂತಸ ವ್ಯಕ್ತಪಡಿಸಿದರು. ಜಲಕ್ರೀಡೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆಯ ಮೂಲಕ ವಿಶೇಷ ಬೋಟಿಂಗ್‌ ವ್ಯವಸ್ಥೆ ಕೈಗೊಳ್ಳಲಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಲೈಫ್‌ ಜಾಕೆಟ್‌, ದೋಣಿವಿಹಾರಿಗಳಿಗೆ ಜೀವವಿಮೆ, ಸೂಕ್ತ ಸ್ಥಳದಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸುವುದು ಸೇರಿದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ದೋಣಿ ನಡೆಸುವ ಸಿಬ್ಬಂದಿಯು ನ್ಯಾಷನಲ್ ಇನ್ಸ್‌ಟ್ಯೂಟ್ ಆಫ್ ವಾಟರ್ ಸ್ಪೋರ್ಟ್ಸ್ ಅಡ್ವೆಂಚರ್ಸ್‌ ಸಂಸ್ಥೆಯಿಂದ ತರಬೇತಿ ನೀಡಲಾಗಿದೆ. ಮಂಗಳೂರು, ಉಡುಪಿ, ಗೋವಾ ಸೇರಿದಂತೆ ಸಮುದ್ರ ತೀರಗಳಿಗೆ ಹೋಗಿ ದೋಣಿ ಪ್ರಯಾಣದ ಅನುಭವವನ್ನು ಹೊಂದಲಾಗಿದೆ.
ವಿಶ್ವೇಶ್ವರಯ್ಯನ ಮೊಮ್ಮಗ ಸತೀಶ್ ಮೋಕ್ಷಗೊಂಡಂ, ಬಿಎಂಟಿಸಿ ಮಾಜಿ ಉಪಾಧ್ಯಕ್ಷ ಕೆ.ವಿ.ನವೀನ್‌ ಕಿರಣ್, ಜಿ.ಪಂ.ಮಾಜಿ ಸದಸ್ಯ ಕೆ.ಎಂ.ಮುನೇಗೌಡ, ಪೋಶೆಟ್ಟಹಳ್ಳಿ ಗ್ರಾ.ಪಂ.ಅಧ್ಯಕ್ಷ ಶ್ರೀನಿವಾಸ್, ಉದ್ಯಮಿ ಮಹೇಶ್, ಮುಖಂಡರಾದ ಅಲ್ಲು ಅನಿಲ್, ಬಾಲಕುಂಟಹಳ್ಳಿ ಗಂಗಾಧರ್, ಪಿಳ್ಳಾಂಜಿನಪ್ಪ, ಚೀಗಟೇನಹಳ್ಳಿ ಮಂಜುನಾಥ್, ಬಿ.ವಿ.ಆನಂದ್, ಕಾಮಗಾನಹಳ್ಳಿ ಸುದರ್ಶನ್ ರೆಡ್ಡಿ ಮತ್ತಿತರರು ಬೋಟಿಂಗ್ ವಿಹಾರ ಹೊರಟು ಖುಷಿಪಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net