

ಮಂಗಳೂರು: ಆಳ ಸಮುದ್ರ ಮೀನುಗಾರಿಕೆ ನಡೆಸುತ್ತಿದ್ದ ನಗರದ ಬೆಂಗರೆಯ ಬೋಟೊಂದು ಶನಿವಾರ ಸಾಯಂಕಾಲ ಮುಳುಗಿದ್ದು, ಅದರಲ್ಲಿ ಇದ್ದ ಎಲ್ಲ 10 ಮೀನುಗಾರರನ್ನು ಇನ್ನೊಂದು ಬೋಟಿನ ಮೀನುಗಾರರರು ರಕ್ಷಿಸಿದ್ದಾರೆ.
ಆಗಸ್ಟ್ ಒಂದರಂದು ಮೀನುಗಾರಿಕೆಗೆ ಸಮುದ್ರಕ್ಕೆ ತೆರಳಿದ್ದ ಬೆಂಗರೆಯ ಕೃಷ್ಣ ಕುಮಾರ್ ಅವರ ಮಾಲೀಕತ್ವದ ಜೈ ಶ್ರೀರಾಂ ಬೋಟು ತಾಂತ್ರಿಕ ಕಾರಣದಿಂದ ಶನಿವಾರ ತೊಂದರೆಗೆ ಸಿಲುಕಿತ್ತು. ಈ ಸಂದರ್ಭದಲ್ಲಿ ಓಂ ಚಾಮುಂಡಿ ಬೋಟ್ ನಲ್ಲಿ ಇದ್ದ ಮೀನುಗಾರರು ಮತ್ತು ಸಿಬ್ಬಂದಿ ತೊಂದರೆಯಲ್ಲಿ ಸಿಲುಕಿದವರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.