

ಹರಪನಹಳ್ಳಿ: ಬಾಗಳಿ ಗ್ರಾಮದಲ್ಲಿ ಸೀಗೆ ಹುಣ್ಣಿಮೆ ಪ್ರಯುಕ್ತ ದೋಣಿ ಕೆಂಚಮ್ಮನ ದೇವಿಗೆ ವಿಶೇಷ ಅಲಂಕಾರ ಮಾಡಿ ಮಂಗಳವಾರ ಪೂಜೆ ಸಲ್ಲಿಸಲಾಯಿತು.
ಬುಧವಾರ ನಸುಕಿನ ಜಾವ ದೇವಿ ಮೂರ್ತಿ ಮೆರವಣಿಗೆ ನಡೆಯಿತು. ಆಂಜನೇಯ ದೇವಸ್ಥಾನ ಮುಂಭಾಗದ ಚೌತಿಕಟ್ಟೆಗೆ ತಲುಪಿದ ನಂತರ ದೇವಿಯ ಪಟ ಹರಾಜು ಪ್ರಕ್ರಿಯೆ ನಡೆಯಿತು. ನಂತರ ದೇವಿ ಮೂರ್ತಿಯನ್ನು ಅದ್ದೂರಿ ಪಂಜಿನ ಮೆರವಣಿಗೆಯೊಂದಿಗೆ ದೋಣಿ ಕೆಂಚಮ್ಮನ ಕೆರೆಯಲ್ಲಿ ವಿಸರ್ಜನೆ ಮಾಡಲಾಯಿತು.
ಗ್ರಾಮದ ಪ್ರಮುಖರಾದ ಬಣಕಾರ ವೀರೇಶಪ್ಪ, ಸಣ್ಣ ಹನುಮಂತಪ್ಪ, ಮುದ್ದಜ್ಜಿ ಚಿನ್ನಜ್ಜ, ಬಿ.ಬಿ.ಹೊಸೂರಪ್ಪ, ಗೌಡ್ರು ಶಿವಣ್ಣ, ಪಾಟೀಲ್ ಬಸಲಿಂಗನಗೌಡ, ಕೆ ಭರಮಜ್ಜ, ಗಂಡೆನ್ನಾರ ನಾಗೇಂದ್ರಪ್ಪ, ಯಮುನಪ್ಪ, ಕೋಟಿ ಭೀಮಪ್ಪ, ಮಾಗಳದ ಕೊಟ್ರೇಶ, ನುಪನೆಪ್ಪ, ರೇಣುಕಪ್ಪ ಬಣಕಾರ, ಚಿಕ್ಕಳ್ಳಿ ನಾಗಪ್ಪ, ಕಲ್ಮನಿ ನಾರಪ್ಪ, ಕಡಬಗೇರಿ ನಾಗರಾಜ, ಜಂಗ್ಲಿ ಕೋಟೆಪ್ಪ, ಬಣಕಾರ ಯುವರಾಜ, ಮಣೆಗಾರ ಕೊಳ್ಳಿ ಬಸವರಾಜ ಇತರರಿದ್ದರು.