ದೋಣಿ ಸಹಿತ 11 ಮೀನುಗಾರರ ರಕ್ಷಣೆ

Boat Accident
Published on

ಮಂಗಳೂರು: ಸಮುದ್ರದ ನಡುವೆ ಇಂಜಿನ್ ಕೆಟ್ಟು ಹೋಗಿ ಅಪಾಯಕ್ಕೀಡಾಗಿದ್ದ ಬೋಟ್ ಮತ್ತು ಅದರಲ್ಲಿದ್ದ 11 ಮೀನುಗಾರರನ್ನು ಇಂಡಿಯನ್ ಕೋಸ್ಟ್ ಗಾರ್ಡ್ ಹಡಗಿನ ಮೂಲಕ ಬುಧವಾರ ರಕ್ಷಣೆ ಮಾಡಲಾಗಿದೆ.

ಸಾಗರ್ ಸಾಮ್ರಾಟ್ ಎನ್ನುವ ಮೀನುಗಾರಿಕಾ ಬೋಟ್ ಮಲ್ಪೆ ಬಂದರಿನಿಂದ 35 ನಾಟಿಕಲ್ ಮೈಲು ದೂರದಲ್ಲಿ ಸಮುದ್ರ ಮಧ್ಯೆ ಅಪಾಯಕ್ಕೀಡಾಗಿತ್ತು. ಮಂಗಳವಾರ ಸಂಜೆ ತುರ್ತು ರಕ್ಷಣೆ ಕೋರಿ ಕೋಸ್ಟ್ ಗಾರ್ಡ್ ಪಡೆಗೆ ಮನವಿ ಮಾಡಲಾಗಿತ್ತು. ಮಂಗಳೂರಿನಿಂದ ಐಸಿಜಿ ನೌಕೆ ರಾಜದೂತ್ ಮೂಲಕ ರಾತ್ರಿ 11 ಗಂಟೆ ಸುಮಾರಿಗೆ ಕೋಸ್ಟ್ ಗಾರ್ಡ್ ಸ್ಥಳಕ್ಕೆ ತೆರಳಿತ್ತು. ಆದರೆ ಭಾರಿ ಗಾಳಿಯ ಹೊಡೆತಕ್ಕೆ ರಕ್ಷಣಾ ಕಾರ್ಯ ಮುಂದುವರಿಸಲು ಸಾಧ್ಯವಾಗಿರಲಿಲ್ಲ.

ಬೆಳಗ್ಗೆ ಗಾಳಿಯ ರಭಸ ಕಡಿಮೆಯಾದ ಸಂದರ್ಭ ಮೀನುಗಾರಿಕಾ ಬೋಟನ್ನು ಮೀನುಗಾರರ ಸಹಿತ ದಡಕ್ಕೆ ಎಳೆತಂದಿದ್ದು, ಮಲ್ಪೆ ಬಂದರಿನ ಬಳಿ ಮೀನುಗಾರಿಕಾ ಇಲಾಖೆಯ ವಶಕ್ಕೆ ಒಪ್ಪಿಸಿದೆ. ಮೀನುಗಾರಿಕಾ ಇಲಾಖೆ ಕೋರಿಕೆಯ ಮೇರೆಗೆ ಕೋಸ್ಟ್ಗಾರ್ಡ್ ಅರಬ್ಬಿ ಸಮುದ್ರದಲ್ಲಿ ಗಸ್ತು ಮುಂದುವರಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net