ದೋಣಿ ಮಗುಚಿ ಮೀನುಗಾರ ಮೃತ್ಯು

boat new
Published on

ಪಡುಬಿದ್ರಿ: ಹೆಜಮಾಡಿ ಕೋಡಿ ಅಳಿವೆ ಬಾಗಿಲಿನಲ್ಲಿ ಮಂಗಳಾವಾರ ಮುಂಜಾನೆ ಸಾಂಪ್ರದಾಯಿಕ ಮೀನುಗಾರಿಕೆ ಮಾಡುತ್ತಿದ್ದ ಸಂದರ್ಭ ಏಕಾಏಕಿ ಸಮುದ್ರದ ಅಲೆ ಅಪ್ಪಳಿಸಿ ದೋಣಿ ಮಗುಚಿ ಹೆಜಮಾಡಿ ಕೋಡಿಯ ಮಾನಂಪಾಡಿ ಮೀನುಗಾರ ಜಯಂತ್(51) ಮೃತಪಟ್ಟಿದ್ದಾರೆ. ಹೆಜಮಾಡಿ ಕೋಡಿಯಿಂದ ಶಾಂಭವಿ-ನಂದಿನ ಸಂಗಮ ಅಳಿವೆ ಬಾಗಿಲಿನಲ್ಲಿ ಮುಂಜಾನೆ ಜಯಂತ್, ಮಗ ತರುಣ್‌ನೊಂದಿಗೆ ಮೀನುಗಾರಿಕೆ ನಿರತರಾಗಿದ್ದರು. ಈ ಸಂದರ್ಭ ಬೃಹತ್ ಅಲೆಯೊಂದು ಜಯಂತ್ ಇದ್ದ ದೋಣಿಗೆ ಬಡಿದು ಅವರಿಬ್ಬರು ನೀರಿಗೆ ಬಿದ್ದರು. ಅದನ್ನು ಗಮನಿಸಿದ ಇನ್ನೊಂದು ದೋಣಿಯಲ್ಲಿದ್ದ ಕರುಣಾಕರ ಕೋಟ್ಯಾನ್ ಮತ್ತು ಮೋಹನ್‌ದಾಸ್ ತಕ್ಷಣ ನೀರಿಗೆ ಜಿಗಿದು ತರುಣ್‌ನನ್ನು ರಕ್ಷಿಸಿದರು. ಜಯಂತ್‌ರನ್ನು ಹುಡುಕಾಡಿದಾಗ ಅವರು ಮೃತಪಟ್ಟಿರುವುದು ಗೊತ್ತಾಗಿದೆ. ಮಾನಂಪಾಡಿ ಮೊಗವೀರ ಮಹಾಸಭಾದ ಸಕ್ರಿಯ ಸದಸ್ಯರಾಗಿದ್ದ ಜಯಂತ್ ಅವರು ಪತ್ನಿ ಹಾಗೂ ನಾಲ್ವರು ಪುತ್ರರನ್ನು ಅಗಲಿದ್ದಾರೆ. ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net