ಚಂಡಮಾರುತಕ್ಕೆ ಬೋಟ್​ ಸಿಲುಕಿ 8 ಮಂದಿ ನಾಪತ್ತೆ; ಒಬ್ಬರ ಶವ ಕಾಪು ಬಳಿ ಪತ್ತೆ

cyclone
ಸಾಂದರ್ಭಿಕ ಚಿತ್ರ
Published on

ಮಂಗಳೂರು: ಇಲ್ಲಿನ ಎಂಆರ್‌ಪಿಎಲ್‌ಗೆ ಸಂಬಂಧಿಸಿದ ತೇಲು ಜೆಟ್ಟಿ (ಸಿಂಗಲ್ ಪಾಯಿಂಟ್ ಮೂರಿಂಗ್) ನಿರ್ವಹಣೆ ಮಾಡುವವರ ಬೋಟ್‌ವೊಂದು ಚಂಡಮಾರುತಕ್ಕೆ ಸಿಲುಕಿ ನೀರುಪಾಲಾಗಿದ್ದು 8 ಮಂದಿ ನಾಪತ್ತೆಯಾಗಿದ್ದಾರೆ. ಒಬ್ಬರ ಮೃತದೇಹ ಕಾಪು ಸಮೀಪ ಪತ್ತೆಯಾಗಿದೆ.

ಮಂಗಳೂರಿನ ನವಮಂಗಳೂರು ಬಂದರಿನಿಂದ ಸುಮಾರು 17 ಕಿ.ಮೀ. ದೂರದಲ್ಲಿ ಅರಬ್ಬಿ ಸಮುದ್ರದಲ್ಲಿರುವ ಎಸ್‌ಪಿಎಂ ಮೂಲಕ ದೊಡ್ಡ ದೊಡ್ಡ ತೈಲ ಹಡಗುಗಳಿಂದ ತೈಲವನ್ನು ಸ್ವೀಕರಿಸಲಾಗುತ್ತದೆ. ಇದಕ್ಕೆ ಬೇಕಾದ ನಿರ್ವಹಣಾ ಕೆಲಸಗಳಿಗೆ ಬೋಟ್ ಮೂಲಕ ಔಟ್‌ಸೋರ್ಸ್ ಮಾಡಲಾದ ಸಿಬ್ಬಂದಿ ತೆರಳುತ್ತಾರೆ.

ಈ ಕೆಲಸವನ್ನು ನಿರ್ವಹಣೆ ಮಾಡುತ್ತಿದ್ದ 9 ಮಂದಿಯ ತಂಡ ಡಗ್ ಅಲಯನ್ಸ್ ಎಂಬ ದೋಣಿಯಲ್ಲಿ ಶುಕ್ರವಾರ ಎಸ್‌ಪಿಎಂಗೆ ತೆರಳಿತ್ತು. ರಾತ್ರಿಯೇ ಮರಳಬೇಕಿತ್ತು. ಆದರೆ ತಂಡ ಶನಿವಾರ ಬೆಳಗ್ಗೆ ಎಸ್‌ಪಿಎಂನಿಂದ ಹೊರಟಿದೆ. ಹೊರಟವರು ಮರಳಿ ನವಮಂಗಳೂರು ಬಂದರು ತಲಪಿಲ್ಲ. ಅಂಡರ್ ವಾಟರ್ ಸರ್ವಿಸಸ್ ಎನ್ನುವ ಕಂಪನಿಗೆ ಸೇರಿದ ಸಿಬ್ಬಂದಿ ಇವರಾಗಿದ್ದಾರೆ ಎಂದು ತಿಳಿದುಬಂದಿದೆ. ಐದು ವರ್ಷಕ್ಕೊಮ್ಮೆ ಗುತ್ತಿಗೆ ನೀಡಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net