

ಕೋಟ: ಹಂಗಾರಕಟ್ಟೆ ಸಮೀಪ ತಾಂತ್ರಿಕ ಸಮಸ್ಯೆಯಿಂದ ಬೋಟ್ ದಡಕ್ಕೆ ಅಪ್ಪಳಿಸಿ ಲಕ್ಷಾಂತರ ರೂ. ನಷ್ಟವುಂಟಾಗಿದ್ದು, ಐದು ಮಂದಿ ಪಾರಾಗಿದ್ದಾರೆ. ಕೋಡಿಬೆಂಗ್ರೆಯ ಪ್ರಕಾಶ್ ಕುಂದರ್ ಎಂಬುವರಿಗೆ ಮಹಾಕಾಳಿ ಹೆಸರಿನ ಬೋಟ್ ಸೆ.17ರಂದು ಬೆಳಗ್ಗೆ ಕೋಡಿ ಬೆಂಗ್ರೆ ಮೀನುಗಾರಿಕಾ ಬಂದರಿನಿಂದ ಮೀನುಗಾರಿಕೆಗೆ ತೆರಳಿತ್ತು. ಮಧ್ಯಾಹ್ನ ಹಂಗಾರಕಟ್ಟೆ ಬಂದರು ಸಮೀಪ ಮೀನುಗಾರಿಕೆ ನಡೆಸುತ್ತಿದ್ದಾಗ ತಾಂತ್ರಿಕ ಸಮಸ್ಯೆಯಿಂದ ಇಂಜಿನ್ ಬಂದ್ ಆಗಿದೆ. ಗಾಳಿ, ಅಲೆಗಳ ರಭಸಕ್ಕೆ ಬೋಟ್ ತೀರಕ್ಕೆ ಬಂದು ಕೋಡಿ ಸಮುದ್ರದ ದಡಕ್ಕೆ ಅಪ್ಪಳಿಸಿದೆ. ಬೋಟ್ನಲ್ಲಿದ್ದ ಐವರು ಅಪಾಯದಿಂದ ಪಾರಾಗಿದ್ದು, ಬೋಟ್ ಮತ್ತು ಇನ್ನಿತರ ಸಾಮಗ್ರಿಗಳು ಹಾನಿಗೀಡಾಗಿ 10 ಲಕ್ಷ ರೂ.ಗೂ ಹೆಚ್ಚು ನಷ್ಟ ಸಂಭವಿಸಿದೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.