ದಡಕ್ಕೆ ಅಪ್ಪಳಿಸಿದ ಬೋಟ್

Boat accident
Published on

ಉಳ್ಳಾಲ: ಕೋಡಿಯಿಂದ ಮೀನುಗಾರಿಕೆಗೆ ತೆರಳಿದ್ದ ಬೋಟ್ ಮೊಗವೀರಪಟ್ಣದಲ್ಲಿ ದಡಕ್ಕೆ ಅಪ್ಪಳಿಸುವ ಮೂಲಕ ಅಪಘಾತಕ್ಕೀಡಾಗಿದ್ದು, ಅದರಲ್ಲಿದ್ದ ಹತ್ತು ಮೀನುಗಾರರನ್ನು ಸ್ಥಳೀಯರು ರಕ್ಷಿಸಲಾಗಿದೆ.

ಉಳ್ಳಾಲದ ಅಶ್ರಫ್ ಮತ್ತು ಫಾರೂಕ್ ಎಂಬುವರು ಪಾಲುದಾರಿಕೆ ಹೊಂದಿರುವ ಅಜಾನ್ ಹೆಸರಿನ ಬೋಟ್ ಮೀನುಗಾರಿಕೆಗಾಗಿ ಶನಿವಾರ ರಾತ್ರಿ ಕೋಡಿಯಿಂದ ತೆರಳಿತ್ತು. ಭಾನುವಾರ ಮುಂಜಾನೆ 1.30ರ ವೇಳೆಗೆ ಅಪಘಾತಕ್ಕೀಡಾಗಿದೆ. ಬೋಟ್‌ನಲ್ಲಿ ಹತ್ತು ಮೀನುಗಾರರಿದ್ದರು. ಮಾಹಿತಿ ಪಡೆದ ಸ್ಥಳೀಯರು ಮೀನುಗಾರರನ್ನು ರಕ್ಷಿಸಿದ್ದಾರೆ. ಘಟನೆ ಸಂದರ್ಭ ಬೋಟ್‌ನಲ್ಲಿದ್ದ ಐವರು ಮದ್ಯ ಸೇವಿಸಿದ್ದರು. ಅವರೇ ಬೋಟ್ ಚಲಾಯಿಸುತ್ತಿದ್ದರು ಎನ್ನುವ ಆರೋಪವೂ ಕೇಳಿಬಂದಿದೆ. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಡಲ್ಕೊರೆತ ತಡೆಗಾಗಿ ಮೊಗವೀರ ಪಟ್ಣ ಪ್ರದೇಶದಲ್ಲಿ 1,070 ಮೀಟರ್ ಅಂತರದಲ್ಲಿ ಎರಡು ಬಂಡೆಗಳ ಸಾಲುಗಳನ್ನು ಅಳವಡಿಸಲಾಗಿದೆ. ಇಲ್ಲಿ ಸೂಚನಾ ಫಲಕ ಇಲ್ಲದ ಕಾರಣ ನಸುಕಿನ ಜಾವ ಅಥವಾ ರಾತ್ರಿ ವೇಳೆ ಮೀನುಗಾರಿಕೆ ನಡೆಸುವವರು ಇದನ್ನೇ ಅಳಿವೆ ಬಾಗಿಲೆಂದು ಭಾವಿಸುವುದರಿಂದ ಅಪಘಾತ ಸಂಭವಿಸುತ್ತಿದೆ ಎಂಬುದು ಮೀನುಗಾರರ ಆರೋಪ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net