ಆಡಳಿತ ಮಂಡಳಿ ಸದಸ್ಯರ ಸಭೆ- ಸರ್ವರ ಸಹಕಾರದಿಂದ ಸಂಘಗಳ ಅಭಿವೃದ್ಧಿ

Gattirattihala PLDB Meeding
ಘಟ್ಟಿರಡ್ಡಿಹಾಳ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಹಮ್ಮಿಕೊಂಡಿದ್ದ ಆಡಳಿತ ಮಂಡಳಿ ಸದಸ್ಯರ ಸಭೆಯಲ್ಲಿ ಸಿಇಒ ಕಿರಣ ಅಂಗಡಿ ಮಾತನಾಡಿದರು.
Published on

ಅಳವಂಡಿ: ಸರ್ವರ ಸಹಕಾರದಿಂದ ಸಹಕಾರ ಸಂಘಗಳ ಅಭಿವೃದ್ಧಿ ಸಾಧ್ಯ ಎಂದು ಕೊಪ್ಪಳ ಆರ್‌ಡಿಸಿಸಿ ಬ್ಯಾಂಕ್ ವೃತ್ತ ವೀಕ್ಷಕ ರಾಚಯ್ಯ ಕೇಲೂರಮಠ ಹೇಳಿದರು.

ಸಮೀಪದ ಘಟ್ಟಿರಡ್ಡಿಹಾಳ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಆಡಳಿತ ಮಂಡಳಿ ಸದಸ್ಯರ ಸಭೆಯಲ್ಲಿ ಮಾತನಾಡಿ, ನಮ್ಮಿಂದ ನಮಗಾಗಿ ಸಹಕಾರ ತತ್ವದಡಿ ಸಂಘಗಳು ಕೆಲಸ ನಿರ್ವಹಿಸುತ್ತಿದ್ದು, ಎಲ್ಲರ ಸಹಕಾರ ಅಗತ್ಯ ಎಂದರು.

ಸಹಕಾರರ ಸಂಘದಲ್ಲಿ ರೈತರಿಗೆ ಬಡ್ಡಿ ರಹಿತ ಸಾಲ ನೀಡುತ್ತಿದ್ದು, ಇದರ ಉಪಯೋಗವನ್ನು ರೈತರು ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕು. ಸಾಲವನ್ನು ನಿರ್ದಿಷ್ಟ ಅವಧಿಯೊಳಗೆ ಮರುಪಾವತಿಸಿದರೆ ಬಡ್ಡಿರಹಿತ ಸಾಲ ಸಿಗುತ್ತದೆ. ಹೀಗಾಗಿ ಎಲ್ಲರೂ ಸಕಾಲಕ್ಕೆ ಸಾಲ ತೀರಿಸಬೇಕು. ಮಹಿಳಾ ಸ್ವಸಹಾಯ ಸಂಘಗಳಿಗೂ ಬಡ್ಡಿ ರಹಿತ ಸಾಲ ಸಿಗಲಿದೆ. ಸಾಲಗಳ ಮರುಪಾವತಿಯಿಂದ ಮಾತ್ರ ಸಂಘಗಳು ಬಲಿಷ್ಟವಾಗಲು ಸಾಧ್ಯ ಎಂದರು.

ಹಿಂದಿನ ಸಭೆಯ ಗೊತ್ತುವಳಿ ಓದಿ ದೃಢೀಕರಿಸಲಾಯಿತು. ಜಮಾ-ಖರ್ಚು ತಖ್ತೆ, ಸಿ.ಸಿ. ಸಾಲ ನವೀಕರಣ, ಕೃಷಿಯೇತರ ಸಾಲ ವಿತರಣೆ, ವಸೂಲಿ, ವರ್ಷದ ಸಾಲ ವಿತರಣೆ ವರದಿ ತಯಾರಿ, ವಾರ್ಷಿಕ ಲೆಕ್ಕ ಪರಿಶೋಧನೆ, ಎಂ.ಟಿ. ಸಾಲ ವಿತರಣೆ, ಬಾಕಿ ವಸೂಲಾತಿ, ಸ್ವ ಸಹಾಯ ಸಂಘಗಳ ಗುಂಪುಗಳ ರಚನೆ, ನಿಂತ ಸಂಘಗಳ ಚಲಾವಣೆ, ಸಿಬ್ಬಂದಿ ವೇತನ, ಭತ್ಯೆ ಹೆಚ್ಚಳ ಮತ್ತಿತರ ವಿಷಯ ಕುರಿತು ಚರ್ಚಿಸಲಾಯಿತು.

ಸಂಘದ ಸಿಇಒ ಕಿರಣ ಅಂಗಡಿ, ಅಧ್ಯಕ್ಷ ಅಂದಾನಪ್ಪ ಡಂಬಳ, ಉಪಾಧ್ಯಕ್ಷ ಪ್ರಕಾಶ ಹಳ್ಳಿಗುಡಿ, ನಿರ್ದೇಶಕರಾದ ಅಂದಪ್ಪ ಡಂಬಳ, ಉಮೇಶ ಡಂಬಳ, ಸುರೇಶ, ರೇಣವ್ವ ಮೇಟಿ, ಪಾರವ್ವ ಗಿರಡ್ಡಿ, ಬಸಪ್ಪ ಕುರಿ, ಲಕ್ಷ್ಮವ್ವ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net