ನದಿಬಾಗ ಶಾಲೆಗೆ ಸ್ಮಾರ್ಟ್ ಬೋರ್ಡ್ ದೇಣಿಗೆ

BOARD DENIGE
Published on

ಅಂಕೋಲಾ: ತಾಲೂಕಿನ ನದಿಬಾಗ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ದಿ. ಆನಂದು ನೀಲಾ ನಾಯ್ಕ ಸ್ಮರಣಾರ್ಥ ಅವರ ಮಕ್ಕಳು ಸ್ಮಾರ್ಟ್ ಬೋರ್ಡ್ ಕೊಡುಗೆಯಾಗಿ ನೀಡಿದರು. ಪ್ರೇಮಾನಂದ, ರವಿ, ಜ್ಞಾನೇಶ್ವರ, ಸುಮನಾ, ರೋಹಿಣಿ, ಅನಿರುದ್ಧ , ರೋಶನ್ ಈ ಕೊಡುಗೆ ನೀಡಿದರು. ಇನ್ನೊಂದು ಬೋರ್ಡ್ ಅನ್ನು ಉದಯ ದತ್ತಾ ನಾಯ್ಕ, ದೀಪಾ ಉದಯ ನಾಯ್ಕ, ಸೂರಜ್ ಉದಯ ನಾಯ್ಕ ನಾಯ್ಕ ನೀಡಿದರು. ಶಾಲೆಯ ಮುಖ್ಯಾಧ್ಯಾಪಕ ಸಿ.ಡಿ. ಗಾಂವಕರ ಅವರು ಸ್ಮಾರ್ಟ್ ಬೋರ್ಡ್ ದಾನಿಗಳಿಗೆ ಅಭಿನಂದನೆ ಸಲ್ಲಿಸಿದರು. ಸಹ ಶಿಕ್ಷಕಿ ಎಂ.ಎ. ಶೇಖ್, ಎಸ್​ಡಿಎಂಸಿ ಅಧ್ಯಕ್ಷೆ ಶಾಂತಿ ವಿನಾಯಕ ನಾಯಕ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net