ಕಾಫಿ ತೋಟ ನಿರ್ವಹಣೆಗೆ ಮಂಡಳಿ ಸಲಹೆ ಅಗತ್ಯ

ನಂದಿಗುಂದ ಗ್ರಾಮದ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ರಂಜಿತ್‌ಕುಮಾರ್ ಮಾತನಾಡಿದರು. ಮೊಗಪ್ಪ, ರುದ್ರಪ್ಪ, ಪುಟ್ಟಸ್ವಾಮಿ, ಹೂವಯ್ಯ ಇದ್ದರು.
ನಂದಿಗುಂದ ಗ್ರಾಮದ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ರಂಜಿತ್‌ಕುಮಾರ್ ಮಾತನಾಡಿದರು. ಮೊಗಪ್ಪ, ರುದ್ರಪ್ಪ, ಪುಟ್ಟಸ್ವಾಮಿ, ಹೂವಯ್ಯ ಇದ್ದರು.
Published on

ಶನಿವಾರಸಂತೆ: ಭಾರತೀಯ ಕಾಫಿ ಮಂಡಳಿಯ ಸೋಮವಾರಪೇಟೆ ವಿಸ್ತರಣಾ ವಿಭಾಗ ವತಿಯಿಂದ ನಂದಿಗುಂದ ಗ್ರಾಮದ ಸಮುದಾಯ ಭವನದಲ್ಲಿ ಬೆಳೆಗಾರರಿಗೆ ಕಾಫಿ ಕೃಷಿ ಕಾರ್ಯಾಗಾರ ಮತ್ತು ಸಬ್ಸಿಡಿ ಯೋಜನೆ ಕುರಿತಾದ ಮಾಹಿತಿ ಕಾರ್ಯಾಗಾರ ಆಯೋಜಿಸಲಾಗಿತ್ತು.

ವಿಸ್ತರಣಾ ವಿಭಾಗದ ಸಂಪರ್ಕಾಧಿಕಾರಿ ರಂಜಿತ್‌ಕುಮಾರ್ ಮಾತನಾಡಿ, ಕಾಫಿ ಕೃಷಿ ಉಳಿವಿಗೆ ಬೆಳೆಗಾರರು ಪ್ರಯತ್ನಿಸಬೇಕು. ಕಾಫಿ ಮಂಡಳಿಯ ಸಲಹೆ ಪಡೆದು ಕಾಫಿ ತೋಟವನ್ನು ನಿರ್ವಹಣೆ ಮಾಡಬೇಕು. ಆ ಮೂಲಕ ಬೆಳೆಗಾರರು ಕಾಫಿ ಬೆಳೆಯಲ್ಲಿ ಹೆಚ್ಚಿನ ಇಳುವರಿ ಪಡೆಯಲು ಪ್ರಯತ್ನಿಸಬೇಕಿದೆ ಎಂದರು.

ಕಾಫಿ ಮಂಡಳಿಯಿಂದ ಬೆಳೆಗಾರರಿಗೆ ತೋಟದಲ್ಲಿ ಕೆರೆ ಮತ್ತು ಇತರೆ ನೀರಾವರಿ ವ್ಯವಸ್ಥೆ ಮಾಡಿಕೊಳ್ಳಲು 2.5 ಲಕ್ಷ ರೂ.ವರೆಗೆ ಸಹಾಯಧನ ನೀಡಲಾಗುತ್ತದೆ. ಆದರೆ ಸಹಾಯಧನ ಪಡೆದುಕೊಳ್ಳುವ ಬೆಳೆಗಾರರು ಕಾಫಿ ಮಂಡಳಿಯ ನಿಯಮದಂತೆ ಕೆರೆಯನ್ನು ನಿರ್ಮಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಬೆಳೆಗಾರರು ಕಾಫಿ ಮಂಡಳಿಯ ಯೋಜನೆಯನ್ನು ಸದುಪಯೋಗಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಸೋಮವಾರಪೇಟೆ ತಾಲೂಕು ರೈತ ಸಂಘದ ಮುಖಂಡ ಮೊಗಪ್ಪ, ನಂದಿಗುಂದ ಗ್ರಾಮದ ಮುಖಂಡ ರುದ್ರಪ್ಪ, ಪ್ರಮುಖರಾದ ಹೆಗ್ಗುಳ ಪುಟ್ಟಸ್ವಾಮಿ, ಜಿ.ಎಂ.ಚಂದ್ರಶೇಖರ್, ಪರಮೇಶ್, ನಿಂಗಸ್ವಾಮಿ, ರೈತ ಸಂಘದ ಉಪಾಧ್ಯಕ್ಷ ಹೂವಯ್ಯ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net