ಬಿಎನ್‌ಎಂಐಟಿ ಓಪನ್ ಡೇ: ವೃತ್ತಿ ಜೀವನದಲ್ಲಿ 4 ‘ಸಿ’ಗಳು ಬಹಳ ಮುಖ್ಯ ಎಂದ ಕೀರ್ತನಾ ಶರತ್: ಇದರ ವೈಶಿಷ್ಟ್ಯತೆಗಳೇನು?

BNMIT
Published on

ಬೆಂಗಳೂರು: ಬನಶಂಕರಿ 2ನೇ ಹಂತದಲ್ಲಿರುವ ಬಿಎನ್‌ಎಂಐಟಿ ಕಾಲೇಜು ಆವರಣದಲ್ಲಿ ಶನಿವಾರ ಆಯೋಜಿಸಿದ್ದ ‘ಓಪನ್ ಡೇ-2025’ ಯಶಸ್ವಿಯಾಗಿ ಜರುಗಿತು. ಇಂಜಿನಿಯರಿಂಗ್‌ನ ವಿವಿಧ ವಿಭಾಗಗಳ ವಿದ್ಯಾರ್ಥಿಗಳ ಸಂಶೋಧನೆ, ಪ್ರಾಜೆಕ್ಟ್‌ಗಳ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಿತು.

ಓಪನ್ ಡೇನಲ್ಲಿ ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಿಕಲ್ಸ್, ಎಲೆಕ್ಟ್ರಾನಿಕ್ಸ್, ಮೆಕಾನಿಕಲ್ ಸೇರಿ ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಜನೋಪಯೋಗಿ ಪ್ರಾಜೆಕ್ಟ್‌ಗಳನ್ನು ಪ್ರದರ್ಶಿಸಿದ್ದರು. ಹಳೆಯ ಕಾರಿನ ಸಹಾಯದಿಂದ ಎಲೆಕ್ಟ್ರಾನಿಕ್ಸ್ ವಾಹನ, ಮಿಕ್ಸರ್, ಎಐ ತಂತ್ರಜ್ಞಾನದಿಂದ ಮ್ಯೂಸಿಕ್, ಸೂರ್ಯ ನಮಸ್ಕಾರ ಸೇರಿ ಹತ್ತಾರು ಯೋಜನೆಗಳು ವಿದ್ಯಾರ್ಥಿಗಳ ಉತ್ಸಾಹವನ್ನು ಹಿಮ್ಮಡಿಗೊಳಿಸಿತು.

ಜೀವನದಲ್ಲಿ 4 ಸಿ ಬಹಳ ಮುಖ್ಯ:

ಓಪನ್ ಡೇಗೆ ಚಾಲನೆ ನೀಡಿ ಮಾತನಾಡಿದ ಐಬಿಎಂ ಸ್‌ಟಾವೇರ್ ಲ್ಯಾಬ್ಸ್‌ನ ಪ್ರೋಗ್ರಾಂ ಡೈರೆಕ್ಟರ್ ಕೀರ್ತನಾ ಶರತ್, ಜೀವನದಲ್ಲಿ ನಾಲ್ಕು ‘ಸಿ’ ಗಳು ಬಹಳ ಮುಖ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಮೊದಲನೆಯದಾಗಿ ಕ್ಯೂರಿಯಾಸಿಟಿ. ಹೊಸದನ್ನು ತಿಳಿಯುವ, ಕಲಿಯುವುದಕ್ಕಾಗಿ ತಂತ್ರಜ್ಞಾನದ ಅಪ್‌ಡೇಟ್ ಆಗಲು ‘ಕುತೂಹಲ’ ಇರಬೇಕು. ಎರಡನೇಯದಾಗಿ ಕೆಲವೊಮ್ಮೆ ನಿರ್ಧಾರಗಳನ್ನು ಕೈಗೊಳ್ಳುವ ವೇಳೆ ‘ಕರೇಜ್’ (ಧೈರ್ಯ) ಕೂಡ ಬಹಳ ಮುಖ್ಯವಾಗಲಿದೆ. ಮೂರನೆಯದಾಗಿ ‘ಕ್ಯಾಪಿಟಲ್’ (ಬಂಡವಾಳ) ಹೂಡಿಕೆಯಲ್ಲಿ ನೆಟ್‌ವರ್ಕಿಂಗ್ ಬೆಳೆಸುವುದು ಕೂಡ ಮುಖ್ಯವಾಗಲಿದೆ. ಕೊನೆಯದಾಗಿ ‘ಸ್ಥಿರತೆ’ (ಕನ್ಸಿಸ್‌ಟೆನ್ಸಿ) ಇದ್ದಾಗ ಮಾತ್ರ ನಿರಂತರವಾಗಿ ಯಶಸ್ಸು ಸಾಧಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಡಾ. ಎಸ್.ವೈ. ಕುಲಕರ್ಣಿ ಮಾತನಾಡಿ, ವಿವಿಧ ಸಂಸ್ಥೆಗಳ ನಾಲ್ಕು ನವೋದ್ಯಮಗಳು, 85ಕ್ಕೂ ಹೆಚ್ಚಿನ ವಿದ್ಯಾರ್ಥಿಗಳ ಪ್ರಾಜೆಕ್ಟ್‌ಗಳು ಪ್ರದರ್ಶನಗೊಂಡಿವೆ. ಕೃಷಿ, ತಂತ್ರಜ್ಞಾನ ಸೇರಿ ಜನಜೀವನವನ್ನು ಸುಸ್ಥಿರಗೊಳಿಸುವಂತಹ ಯೋಜನೆಗಳಾಗಿವೆ. ಯೋಜನೆಗಳು ಕೂಡ ಹೊಸತನದಿಂದ ಕೂಡಿದ್ದು, ವಿದ್ಯಾರ್ಥಿಗಳ ಆಲೋಚನೆಗಳಿಗೆ ಸಂಸ್ಥೆಯು ಪ್ರೋತ್ಸಾಹ ನೀಡುತ್ತಿದೆ ಎಂದು ಹೇಳಿದರು.

ಚಾರಿಟಿ ಟ್ರಸ್ಟಿ ಪ್ರೊ, ಈಶ್ವರ್ ಎನ್. ಮಾನೆ ಮಾತನಾಡಿ. ಒಂದರಿಂದ 8ನೇ ಸೆಮಿಸ್ಟರ್ ವರೆಗೆ ಎಲ್ಲ ವಿದ್ಯಾರ್ಥಿಗಳು ಉತ್ತಮ ಯೋಜನೆಗಳನ್ನು ಮಾಡಿದ್ದಾರೆ. ಸ್ಪೂರ್ತಿದಾಯಕ ಪ್ರಾಜೆಕ್ಟ್‌ಗಳನ್ನು ಮಾಡಿದ್ದಾರೆ. ವಿದ್ಯಾರ್ಥಿಗಳು ಮಾತ್ರವಲ್ಲ, ಡಿಆರ್‌ಡಿಒ, ಬಿಎಚ್‌ಇಎಲ್‌ನಂತಹ ಉದ್ಯಮಗಳು ಕೂಡ ಭಾಗವಹಿಸಿರುವುದು ಖುಷಿಯ ವಿಚಾರವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕ ಪ್ರೊ. ಟಿ.ಜೆ. ರಾಮಮೂರ್ತಿ, ಉಪ ನಿರ್ದೇಶಕ ಡಾ. ಜಿ.ಎನ್. ಕೃಷ್ಣಮೂರ್ತಿ ಸೇರಿ ಹಲವರು ಭಾಗವಹಿಸಿದ್ದರು.

ವಿದ್ಯಾರ್ಥಿಗಳು ಓಪನ್ ಡೇನಲ್ಲಿ ಪ್ರದರ್ಶಿಸಿರುವ ಪ್ರಾಜೆಕ್ಟ್‌ಗಳು ಒಂದಕ್ಕಿಂತ ಮತ್ತೊಂದು ಅದ್ಭುತವಾಗಿವೆ. ಎಲ್ಲವೂ ಜನ ಸಾಮಾನ್ಯರಿಗೆ ಉಪಯೋಗವಾಗುವ ಯೋಜನೆಗಳಾಗಿವೆ. ಇದಕ್ಕಾಗಿ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. - ನಾರಾಯಣರಾವ್ ಆರ್. ಮಾನೆ, ಬಿಎನ್‌ಎಂಐಟಿ ಆಡಳಿತ ಮಂಡಳಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net