

ವಿಜಯವಾಣಿ ಸುದ್ದಿಜಾಲ ಮೂಡಲಗಿ
ತಾಲೂಕಿನ ನಾಗನೂರ ಗ್ರಾಮದಲ್ಲಿ ಹೈನುಗಾರಿಕೆ ಸಾಲ ಮರು ಪಾವತಿಸಲು ವಿಳಂಬ ಮಾಡಿರುವುದಕ್ಕೆ ಖಾಸಗಿ ಬ್ಯಾಂಕ್ ಅಧಿಕಾರಿಗಳು ಬಾಣಂತಿ ಸಮೇತ ರೈತ ಕುಟುಂಬವನ್ನು ಹೊರ ಹಾಕಿ ಮನೆ ಜಪ್ತಿ ಮಾಡಿರುವುದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಗ್ರಾಮದ ರೈತ ಶಂಕರಪ್ಪ ಗದ್ದಾಡಿ ಎಂಬುವರು ಹೈನುಗಾರಿಕೆಗಾಗಿ ತಮಿಳುನಾಡು ಚೆನ್ನೈ ಮೂಲದ ಖಾಸಗಿ ಫೈನಾನ್ಸ್ ನಿಂದ ಹೈನುಗಾರಿಕೆ ಗಾಗಿ ಐದು ಲಕ್ಷ ರೂ.ಸಾಲ ಪಡೆದಿದ್ದನು. ಆದರೆ, ಹೈನುಗಾರಿಕೆ ನಿರೀಕ್ಷಿತ ಪ್ರಮಾಣದಲ್ಲಿ ಆದಾಯ ಬಾರದಿರುವುದಕ್ಕೆ ಸಾಲಮರುಪಾವತಿಸಲು ವಿಳಂಬ ಮಾಡಿದ್ದನು. ಆದರ, ಬ್ಯಾಂಕಿನ ಅಧಿಕಾರಿಗಳು ಏಕಾಕಿ ಮನೆಗೆನುಗ್ಗಿ ಮನೆಯಲ್ಲದ್ದ ಬಾಣಂತಿ ಸಮೇತ ಮನೆಯಲ್ಲಿರುವ ಎಲ್ಲರನ್ನು ಹೊರ ಹಾಕಿದ್ದಾರೆ. ಮತ್ತೊಂದೆಡೆ ಕೊರೆಯುವ ಚಳಿಯಲ್ಲಿ ಸೋಮವಾರ ರಾತ್ರಿಯಿಂದ ಊಟವಿಲ್ಲದೇ ಮಗುವಿಗೆ ಹಾಲುನಿಸಲು ಆಗದೇ ಬಾಣಂತಿ ಸಂಗೀತಾ ಕಣ್ಣೀರು ಹಾಕಿದ್ದಾರೆ.