ಇನ್ಮುಂದೆ ಎಚ್​ಎಸ್​ಆರ್​ ಬಡಾವಣೆಯಲ್ಲೂ ಫೀಡರ್​ ಬಸ್​ ಸಂಚಾರ

BMTC
ಸಾಂದರ್ಭಿಕ ಚಿತ್ರ
Published on

ಬೆಂಗಳೂರು: ನಗರದ ಎಚ್​ಎಸ್​ಆರ್​ ಬಡಾವಣೆಯಲ್ಲಿ ಬಿಎಂಟಿಸಿ ಫೀಡರ್​ ಬಸ್​ ಸೇವೆಗೆ ಸೋಮವಾರ ಚಾಲನೆ ನೀಡಲಾಯಿತು. ಇದೇ ವೇಳೆ ಬಡಾವಣೆಯ ನಾಗರಿಕರಿಗೆ ಫೀಡರ್​ ಬಸ್​ ಸೇವೆ ಬಳಸಿಕೊಳ್ಳುವಂತೆ ಬೀದಿ ನಾಟಕ ಪ್ರದರ್ಶನ ಮೂಲಕ ಅರಿವು ಮೂಡಿಸಲಾಯಿತು.

ಎಚ್​ಎಸ್​ಆರ್​ ಬಡಾವಣೆಯಲ್ಲಿ ಬಿಎಂಟಿಸಿ ಫೀಡರ್​ ಬಸ್​ ಸೇವೆ ಆರಂಭಿಸಿರುವುದರಿಂದ ವಿದ್ಯಾರ್ಥಿಗಳು ಹಾಗೂ ಮಹಿಳೆಯರಿಗೆ ಹೆಚ್ಚಿನ ಉಪಯೋಗವಾಗಲಿದೆ. ಈ ಸೇವೆ ಬಡಾವಣೆಯ 7 ಹಂತಗಳಲ್ಲೂ ಲಭ್ಯವಿದ್ದು, 10 ರೂ. ದರ ನಿಗದಿಪಡಿಸಲಾಗಿದೆ. ಅಗರ, ಪರಂಗಿಪಾಳ್ಯ, ಮಂಗಮ್ಮನಪಾಳ್ಯ ಸೇರಿದಂತೆ ಹಲವು ಕಡೆಗಳಿಗೆ ಬಸ್​ ಸಂಚಾರ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net