ಬಿಎಂಟಿಸಿ ಹೆಚ್ಚುವರಿ ಬಸ್ ಸೇವೆ

bmtc
Published on

ಬೆಂಗಳೂರು: ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜ.೧೭ರಂದು ನಡೆಯಲಿರುವ ಭಾರತ ಮತ್ತು ಅ್ಘಾನಿಸ್ತಾನ ನಡುವೆ ಕ್ರಿಕೆಟ್ ಪಂದ್ಯ ವೀಕ್ಷಣೆಗೆ ಬರುವವರಿಗಾಗಿ ಬಿಎಂಟಿಸಿ ಹೆಚ್ಚುವರಿ ಬಸ್ ಸೇವೆ ನೀಡಲಿದೆ. ಪಂದ್ಯ ಮುಕ್ತಾಯದ ನಂತರ ಚಿನ್ನಸ್ವಾಮಿ ಕ್ರೀಡಾಂಗಣದಿಂದ ನಗರ ವಿವಿಧ ಕಡೆಗಳಿಗೆ ತೆರಳುವವರಿಗೆ ತಡರಾತ್ರಿ ಬಸ್‌ಗಳು ಸಂಚರಿಸಲಿವೆ. ಪ್ರಮುಖವಾಗಿ ಕಾಡುಗೋಡಿ ಬಸ್‌ನಿಲ್ದಾಣ, ಎಲೆಕ್ಟ್ರಾನಿಕ್ ಸಿಟಿ, ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್, ಕೆಂಗೇರಿ ಕೆಎಚ್‌ಬಿ ಬಡಾವಣೆ, ನೆಲಮಂಗಲ, ಯಲಹಂಕ ೫ನೇ ಹಂತ, ಆರ್.ಕೆ ಹೆಗಡೆ ನಗರ, ಬಾಗಲೂರು, ಹೊಸಕೋಟೆಗೆ ಹೆಚ್ಚುವರಿ ಬಸ್‌ಗಳು ಸಂಚರಿಸಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net